January 11, 2025

Newsnap Kannada

The World at your finger tips!

dc r

ಆದ್ಯತೆ ಮೇಲೆ ಸಮಸ್ಯೆ ಪರಿಹಾರಕ್ಕೆ ಯತ್ನ ಡಿ‌ಸಿ ರಾಕೇಶ್ ಕುಮಾರ್

Spread the love

ರಾಮನಗರ ಜಿಲ್ಲೆಯ ಕನ್ನಮಂಗಲ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಈ ಬಾರಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ, ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಕೆ ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಸಿ ಇಂದಿನ ಬಹಳಷ್ಟು ಸಮಸ್ಯೆಗಳನ್ನು ಆನ್‌ಲೈನ್ ನಲ್ಲಿ ಪರಿಹರಿಸಬೇಕಿರುತ್ತದೆ. ಇದಕ್ಕೆ ಸಮಯಾವಕಾಶ ಬೇಕಿರುತ್ತದೆ ಎಂದರು.

ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ:

ಚರ್ಚೆಯಿಂದ ಪ್ರಯೋಜನವಿಲ್ಲ. ಜಿಲ್ಲಾಧಿಕಾರಿಗಳು ಬಂದರೂ ಹೋದರು ಎನ್ನುವ ರೀತಿಯಾಗಬಾರದು‌. ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ ಅದರ ಆಧಾರದ ಮೇಲೆ ಅಧಿಕಾರಿಗಳು ಕೈಗೊಳ್ಳುವ ಕ್ರಮದ ಬಗ್ಗೆ ಆದೇಶಿಸಲಾಗುವುದು ಎಂದರು.

ಗ್ರಾಮದಲ್ಲಿ ಬಹಳಷ್ಟು ಜನರು ಪೌತಿ ಖಾತೆ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಮನವಿ ಸಲ್ಲಿಸಿದರು.

ದೊಡ್ಡಮಣ್ಣುಗುಡ್ಡೆ ಸರ್ವೆ ನಂ 1 ಕ್ಕೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆಯಿಂದ ಯಾವುದೇ ವಿವಾದವಿಲ್ಲ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಸ್ಥಳ ಹಸ್ತಾಂತರ ಮಾಡಲು ಕಡತವನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಕಡತ ಬಂದ ನಂತರ ಡಿನೊಟೀಫಿಕೇಷನ್ ಮಾಡಿ ಕಂದಾಯ ದಾಖಲೆಗಳಲ್ಲಿ ದುರಸ್ತ ಮಾಡುವುದು, ಖಾತೆಗೆ ಹೆಸರು ಸೇರಿಸುವ ಕೆಲಸ ಮಾಡಲಾಗುವುದು ಎಂದರು.

ಈ ಹಿನ್ನಲೆಯಲ್ಲಿ ರೈತರಿಂದ ಸರ್ಕಾರ ವಿಧಿಸಿರುವ ಮಾನದಂಡದಂತೆ ರಾಮನಗರ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ದಾಖಲೆ ಸಂಗ್ರಹಿಸಲು ಇಂದಿನಿಂದಲೇ ಪ್ರತಿ ರೈತರಿಗೆ ಪ್ರತ್ಯೇಕ ಕಡತ ತೆರೆಯುವಂತೆ ತಿಳಿಸಿ‌, ಹೊಸ ಕಡತವನ್ನು ಸ್ಥಳಕ್ಕೆ ತರಿಸಿದರು.

ರಸ್ತೆಗಾಗಿ ಅರ್ಜಿ :

ಗ್ರಾಮದ ವಿವಿಧ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಮಾಡಿಕೊಡುವಂತೆ ಗ್ರಾಮಸ್ಥರು ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಮನರೇಗಾ ಯೋಜನೆಯಡಿ ಗ್ರಾಮದ ಒಳಭಾಗದಲ್ಲಿರುವ ರಸ್ತೆಯನ್ನು ಹಂತ ಹಂತವಾಗಿ ಮಾಡಿಕೊಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿ.ಡಿ.ಎಲ್ ಆರ್. ಸಂತೋಷ್ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!