January 29, 2025

Newsnap Kannada

The World at your finger tips!

David

ಡೇವಿಡ್‌ ವಾರ್ನರ್‌ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಣೆ

Spread the love

ಸಿಡ್ನಿ : ಏಕದಿನ ಕ್ರಿಕೆಟ್‌ಗೆ ಆಸೀಸ್‌ ಆಟಗಾರ ಡೇವಿಡ್‌ ವಾರ್ನರ್‌ ವಿದಾಯ (ODI retirement) ಘೋಷಿಸಿದ್ದಾರೆ. ವಾರ್ನರ್ ಹೊಸ ವರ್ಷದ ಆರಂಭದಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಶಾಕ್​ ನೀಡಿದ್ದಾರೆ.

ಪಾಕಿಸ್ತಾನದ (Pakistan) ವಿರುದ್ಧ ಜನವರಿ 3 ರಂದು ಸಿಡ್ನಿಯಲ್ಲಿ ಟೆಸ್ಟ್ ಪಂದ್ಯ ನಡೆಯಲಿದ್ದು , ಈ ಪಂದ್ಯವು ವೃತ್ತಿ ಜೀವನದ ಕೊನೆಯ ಟೆಸ್ಟ್‌ ಪಂದ್ಯವಾಗಲಿದೆ ಎಂದು ವಾರ್ನರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಭಾರತದಲ್ಲಿ ನಡೆದ ವಿಶ್ವಕಪ್​ನಲ್ಲಿ ನಾವು ಅಭೂತಪೂರ್ವ ಗೆಲುವನ್ನು ಸಾಧಿಸಿರುವುದು ನನ್ನ ದೊಡ್ಡ ಸಾಧನೆ . ನಾನು ಏಕದಿನ ಪಂದ್ಯದಿಂದ ನಿವೃತ್ತಿಯಾಗಲು ನಿರ್ಧರಿಸುತ್ತೇನೆ ಎಂದು ಘೋಷಣೆ ಮಾಡಿದರು.

world cup

ಡೇವಿಡ್ ವಾರ್ನರ್ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು ಮತ್ತು ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

Warner

ಇದನ್ನು ಓದಿ – ಕೋವಿಡ್ ಬಗ್ಗೆ ಜಿಲ್ಲೆಯ ಜನರು ಮುಂಜಾಗ್ರತೆವಹಿಸಿ: ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ

ಏಕದಿನ ಕ್ರಿಕೆಟ್‌ಗೆ 2009ರಲ್ಲಿ ಪಾದಾರ್ಪಣೆ ಮಾಡಿದ ಡೇವಿಡ್ ವಾರ್ನರ್ . 161 ಪಂದ್ಯಗಳನ್ನು ಆಡಿ 33 ಅರ್ಧಶತಕ ಮತ್ತು 22 ಶತಕಗಳನ್ನು ಬಾರಿಸುವುದರ ಮೂಲಕ ಒಟ್ಟು 6932 ರನ್ ಗಳಿಸಿ ನಿವೃತ್ತಿಯಾಗಲು ಘೋಷಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!