ಅಪ್ಪ ನಿಧನರಾದ 4 ತಿಂಗಳ ಬಳಿಕ ಮಗಳು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಗ್ರಾಮದಲ್ಲಿ ನಡೆದಿದೆ.
ಸ್ಪಂದನಾ(18) ಮೃತ ಯುವತಿ ಈಕೆ ಎನ್.ಆರ್.ಪುರದಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಪ್ರತಿ ದಿನ ಅಕ್ಕ-ತಂಗಿ ಇಬ್ಬರೂ ಒಟ್ಟಿಗೆ ಕಾಲೇಜಿಗೆ ಹೋಗಿ ಬರುತ್ತಿದ್ದರು. ಆದರೆ ಸ್ಪಂದನಾ ತಂಗಿ ಚಂದನಾ ಮಧ್ಯಾಹ್ನ ಒಂದು ಗಂಟೆಗೆ ಕಾಲೇಜಿನಿಂದ ಬಂದರೂ ಸ್ಪಂದನಾ ಬಂದಿರಲಿಲ್ಲ.
ತಾಯಿ ಮಂಜುಳಾ ಕೇಳಿದ್ದಕ್ಕೆ ನನಗೆ ಸ್ಪೆಷಲ್ ಕ್ಲಾಸ್ ಇದೆ. ನೀನು ಹೋಗು ಎಂದು ಕಳಿಸಿದಳು ಎಂದು ಹೇಳಿದ್ದಾಳೆ.
ಸಂಜೆ ನಾಲ್ಕು ಗಂಟೆಯಾದರೂ ಸ್ಪಂದನಾ ಮನೆಗೆ ಬಂದಿರಲಿಲ್ಲ. ಫೋನ್ ಮಾಡಿದರೆ ನಾಟ್ ರೀಚಬಲ್. ಗಾಬರಿಗೊಂಡ ತಾಯಿ ಕಾಲೇಜು ಬಳಿ ಬಂದು ಕೇಳಿದ್ದಾಳೆ. ಕ್ಲಾಸ್ ಮುಗಿಸಿಕೊಂಡು ಹೋಗಿದ್ದಾಳೆ ಎಂದು ಹೇಳಿದ್ದಾರೆ.
ಗಾಬರಿಯಿಂದ ತಾಯಿ ಸ್ನೇಹಿತರು, ಸಂಬಂಧಿಕರು, ಅಕ್ಕ-ಪಕ್ಕದವರಿಗೆ ಕೇಳಿದ್ದಾಳೆ. ಆದರೆ ಎಲ್ಲೂ ಸ್ಪಂದನಾಳ ಮಾಹಿತಿ ಸಿಗಲಿಲ್ಲ. ಮಗಳನ್ನ ಹುಡುಕಿಕೊಂಡು ಎನ್.ಆರ್.ಪುರ ಭದ್ರಾ ಹಿನ್ನೀರಿನ ಬಳಿಯೂ ಬಂದಿದ್ದಾಳೆ. ಆಗ ಅಲ್ಲಿ ಜನ ಸೇರಿದ್ದನ್ನು ನೋಡಿ ಹೋದಾಗ ಭದ್ರಾ ಹಿನ್ನೀರಿನಲ್ಲಿ ಮಗಳ ಶವ ತೇಲುತ್ತಿದ್ದನ್ನು ಕಂಡು ಕಣ್ಣೀರಿಟ್ಟು ಗೋಳಾಡಿದ್ದಾರೆ.
ಎನ್.ಆರ್.ಪುರ ಠಾಣೆಗೆ ದೂರು ನೀಡಲಾಗಿದೆ.
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
- ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
- ಯೋಗ ಗುರು ಶರತ್ ಜೋಯಿಸ್ ಹೃದಯಾಘಾತದಿಂದ ನಿಧನ
More Stories
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ