January 29, 2026

Newsnap Kannada

The World at your finger tips!

pramoda

ಸರಳ ಶರನ್ನವರಾತ್ರಿ ಪೂಜೆಗೆ ಪ್ರಮೋದಾ ದೇವಿ ನಿರ್ಧಾರ

Spread the love

ಮೈಸೂರು ರಾಜವಂಶದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಈ ವರ್ಷದ ದಸರಾ ಪೂಜಾವಿಧಿಗಳಲ್ಲಿ ಒಂದಾದ ಶರನ್ನವರಾತ್ರಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ.

ಶರನ್ನವರಾತ್ರಿ ಆಚರಣೆಯ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಾಹಾರಾಣಿ ‘ಹೆಚ್ಚಿನ ಕೊರೋನಾ ಪ್ರಕರಣಗಳು ಇರುವ ದೃಷ್ಟಿಯಿಂದ ಮೈಸೂರು ಅರಮನೆಯಲ್ಲಿ 2020
ಸಾಲಿನ ಶರನ್ನವರಾತ್ರಿ ಸಂದರ್ಭದಲ್ಲಿ ಪೂಜಾ ವಿಧಿಗಳನ್ನು ಕೇವಲ ಸಾಂಪ್ರದಾಯಕವಾಗಿ
ನಡೆಸಲಾಗುವುದು.‌ ಮುನ್ನೆಚ್ಚರಿಕೆ ಅತೀ ಅವಶ್ಯಕ ವಾಗಿದೆ. ಆಚರಣೆಯಲ್ಲಿ ಕುಟುಂಬ
ಸದಸ್ಯರನ್ನೂ ಒಳಗೊಂಡಂತೆ ಸಾರ್ವಜನಿಕರ ಹಾಗೂ ಮಾದ್ಯಮಗಳ ಬಾಗವಹಿಸುವಿಕೆ ಇರುವುದಿಲ್ಲ*’ ಎಂದು ಹೇಳಿದ್ದಾರೆ.

ತಮ್ಮ ನಿರ್ಧಾರದ ಕುರಿತು ಎಲ್ಲರ‌ ಸಹಕಾರ ಕೋರಿರುವ ಅವರು ‘ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಎಲ್ಲರ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸುತ್ತೇನೆ’ ಎಂದಿದ್ದಾರೆ.

error: Content is protected !!