December 19, 2024

Newsnap Kannada

The World at your finger tips!

WhatsApp Image 2024 09 23 at 2.08.27 PM

ದಸರಾ ಚಲನಚಿತ್ರೋತ್ಸವ 2024- ಪೋಸ್ಟರ್ ಬಿಡುಗಡೆ

Spread the love

ಮೈಸೂರು : ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2024 ರ ಹಿನ್ನೆಲೆಯಲ್ಲಿ ದಸರಾ ಚಲನಚಿತ್ರೋತ್ಸವ ಪೋಸ್ಟರ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮುಡಾ ಅಧ್ಯಕ್ಷರಾದ ಕೆ. ಮರಿಗೌಡ, ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು‌.

ಇದನ್ನು ಓದಿ – ಮೈಸೂರಿನಲ್ಲಿ ಉಚಿತ ಆಟೋ ರಿಕ್ಷಾ ತರಬೇತಿ

ದಸರಾ ಮಹೋತ್ಸವ ಪ್ರಯುಕ್ತ ಅಕ್ಟೋಬರ್‌ 04 ರಿಂದ 10 ರವರೆಗೆ 7 ದಿನ ನಡೆಯಲಿರುವ ದಸರಾ ಚಲನ ಚಿತ್ರೋತ್ಸವದಲ್ಲಿ 112 ಸಿನಿಮಾಗಳು ಹುಣಸೂರು ರಸ್ತೆಯಲ್ಲಿರುವ ಡಿಆರ್‌ಸಿಯ ಒಂದು ಪರದೆ ಮತ್ತು ಮೈಸೂರಿನಲ್ಲಿರುವ ಐನಾಕ್ಸ್‌ನ ಮೂರು ಪರದೆಗಳಲ್ಲಿ ಪ್ರದರ್ಶನವಾಗಲಿವೆ.

Copyright © All rights reserved Newsnap | Newsever by AF themes.
error: Content is protected !!