January 28, 2026

Newsnap Kannada

The World at your finger tips!

WhatsApp Image 2024 10 04 at 4.05.26 PM

ಶ್ರೀರಂಗಪಟ್ಟಣದಲ್ಲಿ ದಸರಾ ಆನೆ ರಂಪಾಟ, ಜನರಲ್ಲಿ ಆತಂಕ

Spread the love

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ದಸರಾ ಆನೆಗಳು ಆಗಮಿಸಿದ್ದು, ಈ ಸಂದರ್ಭದಲ್ಲಿ ಲಕ್ಷ್ಮಿ ಆನೆ ಕುದುರೆ ನೋಡಿ ಬೆಚ್ಚಿ ಬಿದ್ದಿದೆ. ಜನರು ದಿಕ್ಕಾಪಾಲಾಗಿ ಓಡಿದ್ದು, ಭಾರಿ ಅನಾಹುತ ತಪ್ಪಿದೆ .

ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದ ಜಂಬೂ ಸವಾರಿಯ ಮುಖ್ಯ ಆಕರ್ಷಣೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಆಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಮಹೇಂದ್ರ 400 ಕೆಜಿ ತೂಕದ ಮರದ ಅಂಬಾರಿ ಮತ್ತು ಒಟ್ಟು 650 ಕೆಜಿ ತೂಕದ ಸರ್ವಾಲಂಕೃತ ಚಾಮುಂಡೇಶ್ವರಿ ದೇವಿಯನ್ನು ಸಾಗಿಸುತ್ತದೆ .

image 9

ಈ ಜಂಬೂ ಸವಾರಿಯಲ್ಲಿ ಮಹೇಂದ್ರ, ಹಿರಣ್ಯ ಮತ್ತು ಲಕ್ಷ್ಮಿ ಎಂಬ ಮೂರು ಆನೆಗಳು ಪಾಲ್ಗೊಳ್ಳುತ್ತವೆ. ನಿನ್ನೆ ಸಂಜೆ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದ ಲಕ್ಷ್ಮಿ ಆನೆ, ಬನ್ನಿಮಂಟಪದ ಬಳಿ ನಿಂತಿರುವ ಕುದುರೆ ನೋಡಿದಾಗ ಕಣ್ಣೀರು ಬೀರುವಂತಾಗಿ ಕೆಲ ಕಾಲ ರಂಪಾಟ ಮಾಡಿತು. ಇದರಿಂದಾಗಿ, ಸಾರ್ವಜನಿಕರಲ್ಲಿ ಭಯ ಉಂಟಾಯಿತು. ಆದರೆ, ತಕ್ಷಣವೇ ಮಾವುತ ಮತ್ತು ಕಾವಾಡಿಯವರು ಲಕ್ಷ್ಮಿ ಆನೆಯನ್ನು ನಿಯಂತ್ರಿಸಿದರು.ಶೀಘ್ರದಲ್ಲೇ ಬೆಂಗಳೂರು ಮೆಟ್ರೋ ದರ ಏರಿಕೆ

ಇದೇ ಸಂದರ್ಭದಲ್ಲಿ, ಈ ಘಟನೆ ದೊಡ್ಡ ಅನಾಹುತವನ್ನು ತಪ್ಪಿಸಿದೆ ಎಂದು ತಿಳಿಸಲಾಗಿದೆ.

error: Content is protected !!