ಬಳ್ಳಾರಿ : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಿದ್ದ ನಟ ದರ್ಶನ್ ಗುರುವಾರ ಬೆಳಿಗ್ಗೆ ಬಳ್ಳಾರಿ ಸೆಂಟ್ರಲ್ ಜೈಲ್ ಸೇರಿಕೊಂಡರು.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎ2 ಆಗಿದ್ದ ದರ್ಶನ್ ಕೊನೆಗೂ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ರಾಗಿ ಮುದ್ದೆ ಮುರಿದಿದ್ದಾರೆ.
ಬಳ್ಳಾರಿಗೆ ಹೋದ ತಕ್ಷಣ ಆರೋಪಿ ದರ್ಶನ್ ಮೊದಲು ನನಗೆ ಊಟ ಬೇಡ ಅಂತ ಹೇಳಿದ್ದರಂತೆ. ಆಮೇಲೆ ಒಂದು ಗಂಟೆ ತಡವಾಗಿ ಜೈಲೂಟ ತಿಂದಿದ್ದಾರೆ. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ದರ್ಶನ ಮೊದಲ ಊಟ ಮಾಡಿದ್ದಾರೆ. ಅದು ಕೂಡ ರಾಗಿ ಮುದ್ದೆ, ಬೆಳೆಸಾರು ಹಾಗೂ ಅನ್ನ, ಸಾಂಬರ್ ತಿಂದಿದ್ದಾರಂತೆ.
ಹೈ ಸೆಕ್ಯುರಿಟಿ ಸೆಲ್ ನೋಡಿ ಊಟ ಬೇಡ ಎಂದಿದ್ದ ದರ್ಶನ್ ಗೆ ಇದೀಗ ಜೈಲೂಟವೇ ಫಿಕ್ಸ್ ಆಗಿದೆ.
ಜೈಲಿನ ನಿಯಮದ ಪ್ರಕಾರ ದರ್ಶನ್ ಅವರಿದ್ದ ಹೈ ಸೆಕ್ಯೂರಿಟಿ ಸೆಲ್ ಗೆ ಊಟ ಕಳಿಸಲಾಗಿತ್ತು. ಆದ್ರೆ ಈ ಊಟ ನನಗೆ ಬೇಡ ಅಂತ ದರ್ಶನ್ ಹೇಳಿದ್ದರು.ರಾಜ್ಯದಲ್ಲಿ 53 ಎಫ್‌ಎಂ ಸ್ಥಾಪನೆಗೆ ಅನುಮತಿ
ಈ ಮುಂಚೆ ಬೆಳಗ್ಗೆ ತಿಂಡಿ ಸಹ ನಿರಾಕರಿಸಿದ್ದರಂತೆ. ಜೈಲಿನ ನಿಯಮದ ಪ್ರಕಾರ ಬೆಳಗ್ಗೆ 11 ರಿಂದ 12 ಗಂಟೆಗೆ ಊಟ ಕೊಡಲಾಗುತ್ತೆ. ಇದು ಮಿಸ್ ಆದ್ರೆ ಸಂಜೆ 6 ಗಂಟೆಗೆ ಮಾತ್ರ ಊಟ ಸಿಗುತ್ತೆ. ಟೆನ್ಷನ್ ನಲ್ಲಿರುವ ದರ್ಶನ್ ಊಟ ನಿರಾಕರಿಸಿದ್ದರಂತೆ. ಕೊನೆಗೆ ವಿಧಿ ಇಲ್ಲದೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಆರೋಪಿ ದರ್ಶನ್ ರಾಗಿ ಮುದ್ದೆ ಮುರಿದಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ