ದರ್ಶನ್ , ಪವಿತ್ರ ಜಾಮೀನು ಮುಂದೂಡಿಕೆ:ಮೂವರಿಗೆ ಜಾಮೀನು ಮಂಜೂರು

Team Newsnap
1 Min Read

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾಗಿರುವ ನಟ ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಸೆ​ 25 ಮತ್ತು ಸೆ 27ಕ್ಕೆ ಮುಂದೂಡಿಕೆಯಾಗಿದೆ.

ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ಕಾಲಾವಕಾಶ ಕೋರಿದ್ದಾರೆ. ಅದಕ್ಕೆ ನ್ಯಾಯಾಲಯ ಅವಕಾಶ ನೀಡಿದೆ. ವಿಚಾರಣೆಯನ್ನು ಮುಂದೂಡಿ 57ನೇ ಸಿಸಿಹೆಚ್ ನ್ಯಾಯಾಲಯದ ಜಡ್ಜ್ ಜೈಶಂಕರ್ ಇಂದು ಆದೇಶ ನೀಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಕೇಸ್​ನ ತನಿಖೆ ಅಂತ್ಯವಾಗಿ ಇತ್ತೀಚೆಗೆ ಪೊಲೀಸರು ಚಾರ್ಜ್​ಶೀಟ್​ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಮೂವರಿಗೆ ಜಾಮೀನು ಮಂಜೂರು :

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿದ್ದು, ಮೂವರಿಗೆ ಇಂದು ಜಾಮೀನು ಸಿಕ್ಕಿದೆ. ಎ15 ಆರೋಪಿ ನಿಖಿಲ್ ನಾಯ್ಕ್, ಎ16 ಆರೋಪಿಯಾಗಿದ್ದ ಕೇಶವಮೂರ್ತಿ ಹಾಗೂ ಎ17 ಆರೋಪಿ ಕಾರ್ತಿಕ್ ಗೆ ಹೈಕೋರ್ಟ್ ನಿಂದ ಜಾಮೀನು ಸಿಕ್ಕಿದೆ.

ರೇಣುಕಾಸ್ವಾಮಿ ಹತ್ಯೆ ಕೇಸಿನಲ್ಲಿ ಪ್ರಮುಖ ಆರೋಪಿಗಳಿಂದ ಹಣದ ಆಮಿಷಕ್ಕೆ ಒಳಗಾಗಿ ಶವ ಸಾಗಿಸುವಾಗ, ಪೊಲೀಸರಿಗೆ ಶರಣಾಗುವಲ್ಲಿ ಮಾತ್ರ ಇವರ ಪಾತ್ರವಿತ್ತು, ಹತ್ಯೆಗೂ ಇವರಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿತ್ತು.ಸೆ. 24 ರಂದು ಯುವ ಸಂಭ್ರಮ ಉದ್ಘಾಟನಾ ಸಮಾರಂಭ

ರೇಣುಕಾಸ್ವಾಮಿ ಶವ ಸಿಕ್ಕಿದ ಮರುದಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ಇವರು ಬಂದು ಅಂದರೆ ಜೂನ್ 10ಕ್ಕೆ ಶರಣಾಗಿದ್ದರು. ನಾವೇ ಕೊಲೆ ಮಾಡಿದ್ದಾಗಿ ಆರಂಭದಲ್ಲಿ ಹೇಳಿದ್ದರು. ಕೊನೆಗೆ ಪೊಲೀಸರು ಅವರ ಬಾಯಿ ಬಿಡಿಸಿದಾಗ ಸತ್ಯ ಹೊರಬಂದಿತ್ತು ಎಂದು ಹೇಳಲಾಗುತ್ತಿದೆ.

Share This Article
Leave a comment