ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಕೀಳಾಗಿ ನಟ ಜಗ್ಗೇಶ್ ಮಾತನಾಡಿದ್ದಾರೆ ಎಂಬ ವಿಚಾರದ ಕುರಿತಾಗಿ ತೋತಾಪುರಿ ಸೆಟ್ ಗೆ ನುಗ್ಗಿದ ನಟ ದರ್ಶನ್ ಅಭಿಮಾನಿಗಳ ಪ್ರತಿಭಟನೆ ಮಾಡಿ ಜಗ್ಗೇಶ್ ಕ್ಷಮೆ ಕೇಳುವ ತನಕ ಬಿಡದಿರುವ ಪ್ರಸಂಗ ಜರುಗಿತು.
ಮೈಸೂರಿ ಜಿಲ್ಲೆಯ ಟಿ ನರಸೀಪುರದಲ್ಲಿ ನಡೆಯುತ್ತಿದ್ದ ತೋತಾಪುರಿ ಸಿನಿಮಾ ಶೂಟಿಂಗ್ ಸ್ಥಳಕ್ಕೆ ನುಗ್ಗಿದ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಪಟ್ಟು ಹಿಡಿದು, ಕೂಗಾಟ ಆರಂಭಿಸಿದರು.
ಕ್ಷಮೆ ಕೇಳಿದ ಜಗ್ಗೇಶ್ :
ಡಿ ಬಾಸ್’ ಅಭಿಮಾನಿಗಳ ಕ್ಷಮೆ ಕೇಳಿದ ಜಗ್ಗೇಶ್, ದರ್ಶನ್ ಮತ್ತು ನನ್ನ ನಡುವೆ ತಂದಿಡುವ ಹುನ್ನಾರ ಮಾಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ರಾಜಕೀಯ ಇದೆ. ಪಿತೂರಿ ಮಾಡಿದ್ದಾರೆ. ನಾನು ದರ್ಶನ್ ಬಗ್ಗೆ ಆ ರೀತಿ ಮಾತನಾಡಲೇ ಇಲ್ಲ. ನಾನು ಒಂದು ಪತ್ರಿಕೆಯ ಬಗ್ಗೆ ಮಾತನಾಡಿದೆ. ಈ ವಿಚಾರವನ್ನು ಇಟ್ಟುಕೊಂಡು ನನ್ನ ವಿರುದ್ಧ ಹುನ್ನಾರ ಮಾಡಿದ್ದಾರೆ. ನನಗೆ ಇದಕ್ಕೂ ಸಂಬಂಧವಿಲ್ಲ, ಇಂಡಸ್ಟ್ರೀಯಲ್ಲಿ ದೊಡ್ಡ ರಾಜಕೀಯ ನಡೆಯುತ್ತಿದೆ ಎಂದು ದರ್ಶನ್ ಅಭಿಮಾನಿಗಳಿಗೆ ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.
ಜಗ್ಗೇಶ್ ವಿರುದ್ದ ಘೋಷಣೆ:
ಜಗ್ಗೇಶ್ ವಿರುದ್ಧವಾಗಿ ಕೆಲವರು ಘೋಷಣೆ ಕೂಗಿ, ದರ್ಶನ್ ಅವರ ಬಳಿ ಕ್ಷಮೆ ಕೇಳಬೇಕು. ಒಬ್ಬ ಹಿರಿಯ ನಟರಾಗಿ ನೀವು ಹೇಗಿರಬೇಕು ಎಂದು ಅಭಿಮಾನಿಗಳು ಜಗ್ಗೇಶ್ ಅವರನ್ನು ಕೇಳಿದ್ದಾರೆ. ನಟ ದರ್ಶನ್‍ಗೂ ಕರೆ ಮಾಡಲು ನಟ ಜಗ್ಗೇಶ್ ಯತ್ನಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು