ಇದೊಂದು ಆಘಾತಕಾರಿ ಸುದ್ದಿ. ಡಾರ್ಕ್ ವೆಬ್ ನಲ್ಲಿ 100 ಮಿಲಿಯನ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ದಾರರ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿವೆ.
ಈ ಕುರಿತಂತೆ ಭದ್ರತಾ ಸಂಶೋಧಕ ರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿ ದತ್ತಾಂಶವು ಕಾರ್ಡ್ ದಾರರ ಪೂರ್ಣ ಹೆಸರುಗಳು, ದೂರವಾಣಿ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಕಾರ್ಡ್ ಗಳ ಮೊದಲ ಮತ್ತು ಕೊನೆಯ ನಾಲ್ಕು ಅಂಕಿಗಳು ಕೂಡ ಬಹಿರಂಗವಾಗಿವೆ ಎನ್ನಲಾಗಿದೆ.
ಪೇಮೆಂಟ್ಸ್ ಪ್ಲಾಟ್ ಫಾರ್ಮ್ Juspay ಜೊತೆಗೆ ಸಂಬಂಧ ಹೊಂದಿದ್ದು, ಅಮೆಜಾನ್, ಮೇಕ್ ಮೈ ಟ್ರಿಪ್ ಮತ್ತು ಸ್ವಿಗ್ಗಿ ಸೇರಿದಂತೆ ಭಾರತೀಯ ಮತ್ತು ಜಾಗತಿಕ ವರ್ತಕರಿಗೆ ವಹಿವಾಟು ಗಳನ್ನು ನೀಡುತ್ತದೆ.ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ತನ್ನ ಬಳಕೆದಾರರ ದತ್ತಾಂಶದಲ್ಲಿ ಆಗಸ್ಟ್ ನಲ್ಲಿ ರಾಜಿ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದೆ.
ಡಾರ್ಕ್ ಇಂಟರ್ನೆಟ್ ನಲ್ಲಿ ಹರಿದಾಡಿದ ದತ್ತಾಂಶವು ಮಾರ್ಚ್ 2017 ರಿಂದ ಆಗಸ್ಟ್ 2020ರ ನಡುವೆ ನಡೆದ ಆನ್ ಲೈನ್ ವ್ಯವಹಾರಗಳಿಗೆ ಸಂಬಂಧಿಸಿದೆ ಎನ್ನಲಾಗಿದೆ.
ಹಲವಾರು ಭಾರತೀಯ ಕಾರ್ಡುದಾರರ ವೈಯಕ್ತಿಕ ವಿವರಗಳು, ಅವರ ಕಾರ್ಡ್ ಅವಧಿ ಮುಗಿದ ದಿನಾಂಕಗಳು, ಗ್ರಾಹಕ ಗುರುತಿನ ಚೀಟಿಗಳು ಮತ್ತು ಕಾರ್ಡ್ ಗಳ ಮೊದಲ ಮತ್ತು ಕೊನೆಯ ನಾಲ್ಕು ಅಂಕಿಗಳು ಸಂಪೂರ್ಣವಾಗಿ ಗೋಚರಿಸುತ್ತದೆ ಅಂಥ ಖಾಸಗಿ ಮಾಧ್ಯಮ ವರದಿ ಮಾಡಿದೆ.
More Stories
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ