December 23, 2024

Newsnap Kannada

The World at your finger tips!

politics,dance,women

dance step with young woman: The whim of GRP members

ಯುವತಿಯೊಂದಿಗೆ ಸಖತ್‌ ಸ್ಟೆಪ್‌ : ಗ್ರಾ.ಪಂ ಸದಸ್ಯರ ಹುಚ್ಚಾಟ

Spread the love

ಮದುವೆ ಸಮಾರಂಭವೊಂದರಲ್ಲಿ ರಾಯಚೂರಿನಗ್ರಾಮ ಚಂದ್ರಬಂಡಾ ಗ್ರಾಮ ಪಂಚಾಯತಿ ಸದಸ್ಯರು ಹುಚ್ಚಾಟ ಮೆರೆದಿದ್ದಾರೆ. ಯುವತಿಯರೊಂದಿಗೆ ಅಸಹ್ಯವಾಗಿ ಕುಣಿದು ಅಸಭ್ಯ ವರ್ತನೆ ತೋರಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರೊಬ್ಬರ ಸಂಬಂಧಿ ಮದುವೆಯಲ್ಲಿ ಮೈಚಳಿ ಬಿಟ್ಟು ಸದಸ್ಯರು ಕುಣಿದು ಕುಪ್ಪಳಿಸಿದ್ದಾರೆ.

ಇದನ್ನು ಓದಿ – ಮೆಡಿಕಲ್ ಸೀಟ್ ಆಮಿಷ : ಹನಿಟ್ರ್ಯಾಪ್ ಮಾಡಿ 1.6 ಕೋಟಿ ರು ವಂಚಿಸಿದ ಯುವತಿಯರೂ ಸೇರಿ ಮೂವರ ಬಂಧನ

ಮೇ 26 ರಂದು ನಡೆದ ಮದುವೆ ಸಮಾರಂಭದಲ್ಲಿ ಘಟನೆ ನಡೆದಿದೆ. ಹೈದರಾಬಾದ್‍ನಿಂದ ನೃತ್ಯ ಮಾಡಲು ಯುವತಿಯರನ್ನು ಕರೆಸಲಾಗಿತ್ತು. ಈ ವೇಳೆ ಜನಪ್ರತಿನಿಧಿಗಳು ಎಂಬುವುದನ್ನು ಮರೆತು ಯುವತಿಯರ ಮೇಲೆ ಹಣ ಎಸೆದು ನೃತ್ಯ ಮಾಡಿದ್ದಾರೆ.

ಮಕ್ಕಳು, ಮಹಿಳೆಯರು, ವೃದ್ಧರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅಸಭ್ಯ ವರ್ತನೆ ತೋರಿದ್ದಾರೆ. ಬಾಯದೊಡ್ಡಿ, ಕುರುಬದೊಡ್ಡಿ, ಗೌಸನಗರ, ಕಡಗಂದೊಡ್ಡಿ, ವಡವಟ್ಟಿ ಗ್ರಾಮ ಪಂಚಾಯತ್‍ನ ಸದಸ್ಯರು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!