January 13, 2025

Newsnap Kannada

The World at your finger tips!

srini sidd

ದಳಕ್ಕೆ ಠಕ್ಕರ್​: ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಳ್ಳಲು ಸಿದ್ದರಾಗಿರುವ ಜೆಡಿಎಸ್​ ಶಾಸಕ

Spread the love

ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಶಾಸಕ ಎಸ್.ಆರ್. ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಬಹುತೇಕ ಸಜ್ಜಾಗಿದೆ

ತುಮಕೂರಿನ ಚಾಲುಕ್ಯ ಖಾಸಗಿ ಆಸ್ಪತ್ರೆ ಉದ್ಘಾಟನೆ ನೆಪದಲ್ಲಿ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವ ಎಸ್.ಆರ್. ಶ್ರೀನಿವಾಸ್ ಇದೇ ಸಂದರ್ಭದಲ್ಲಿ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡುವ ಪ್ಲಾನ್​ನಲ್ಲಿದ್ದಾರೆ ಎನ್ನಲಾಗಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಪುತ್ರ ರಾಜೇಂದ್ರ ಉಪಸ್ಥಿತಿಯಿರಲಿದ್ದಾರೆ.

ಇತ್ತೀಚಿಗೆ ಪಕ್ಷದೊಳಗಿನ ಮನಸ್ತಾಪಗಳಿಂದ ಬೇಸತ್ತು ‘ಕೈ’ ಹಿಡಿಯುವ ಲೆಕ್ಕಾಚಾರದಲ್ಲಿದ್ದ ಎಸ್.ಆರ್. ಶ್ರೀನಿವಾಸ್​ಗೆ ಅಕ್ಟೋಬರ್ 25 ರಂದು ಜೆಡಿಎಸ್​ ಬೃಹತ್​ ಸಮಾವೇಶದಲ್ಲಿ ಕಡೆಗಣಿಸಿ ಶಾಶ್ವತವಾಗಿ ಜೆಡಿಎಸ್​ ಬಾಗಿಲು ಮುಚ್ಚಿದ ಸಂದೇಶ ರವಾನಿಸಿತ್ತು.

ಇದೀಗ ದಳಕ್ಕೆ ಠಕ್ಕರ್ ಕೊಡಲು ರೆಡಿಯಾಗಿರೋ ಶಾಸಕ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೊತೆ ವೇದಿಕೆ ಹಂಚಿಕೊಳ್ಳುವ ತರಾತುರಿಯಲ್ಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!