February 25, 2026

Newsnap Kannada

The World at your finger tips!

sucide

ಅಧ್ಯಕ್ಷರ ಕಿರುಕುಳ ತಾಳಲಾರದೆ ಡೈರಿ ನೌಕರ ಆತ್ಮಹತ್ಯೆ

Spread the love

ಡೈರಿ ಅಧ್ಯಕ್ಷರ ಕಿರುಕುಳಕ್ಕೆ ಬೇಸತ್ತ ನೌಕರನೊಬ್ಬ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ ಆರ್ ಪೇಟೆ ತಾಲೂಕಿನ‌ ತೆಂಡೇಕೆರೆ ಗ್ರಾಮ ಫುಡ್ ಪಾಕ್೯ ಬಳಿ ಸಂಭವಿಸಿದೆ.

ಕೆ ಆರ್ ಪೇಟೆ ತಾಲೂಕಿನ ಲಕ್ಷ್ಮೀ ಪುರ ಗ್ರಾಮದ ಹಾಲಿನ ಡೈರಿ ಕಾರ್ಯದರ್ಶಿ ಶರತ್ (30) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾನು ಕೆಲಸ ಮಾಡುತ್ತಿರುವ ಡೈರಿಯಲ್ಲಿನ ಅಧ್ಯಕ್ಷರ ಕಿರುಕುಳ ಸಹಿಸಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.‌

ಕೆ ಆರ್ ಪೇಟೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!