December 24, 2024

Newsnap Kannada

The World at your finger tips!

deepika

Bollywood actress Deepika Padukone struggles with health: hospitalization

ದೀಪಿಕಾ, ಅಕ್ಷಯ್‌, ಸುಶ್ಮಿತಾ, ಸುಶಾಂತ್‌’ಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ

Spread the love

ಈ ವರ್ಷದ ‘ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ’ ಬಾಲಿವುಡ್‌ನ‌ ದೀಪಿಕಾ ಪಡುಕೋಣೆ, ಅಕ್ಷಯ್‌ ಕುಮಾರ್‌, ಸುಶ್ಮಿತಾ ಸೇನ್‌, ಸುಶಾಂತ್‌ ಸಿಂಗ್‌ ರಜಪೂತ್‌ ಅವರಿಗೆ ಸಂದಿದೆ.‌

  • ಆ್ಯಸಿಡ್‌ ದಾಳಿಗೆ ತುತ್ತಾಗಿ ಬದುಕುಳಿದ ಲಕ್ಷ್ಮಿ ಅಗರ್ವಾಲ್‌ ಜೀವನಗಾಥೆಯ, ಮೇಘನಾ ಗುಲ್ಜಾರ್‌ ನಿರ್ದೇಶನದ ‘ಚಪಾಕ್‌’ ಚಿತ್ರದ ನಟನೆಗಾಗಿ ದೀಪಿಕಾ ಪಡುಕೋಣೆಗೆ ‘ಉತ್ತಮ ನಟಿ’ ಪ್ರಶಸ್ತಿ ಲಭಿಸಿದೆ.
  • ಹಾರರ್‌- ಕಾಮಿಡಿ ‘ಲಕ್ಷ್ಮಿ’ ಚಿತ್ರದ ನಟನೆಗಾಗಿ ಬಾಲಿವುಡ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ಗೆ ‘ಉತ್ತಮ ನಟ’ ಪ್ರಶಸ್ತಿ ದೊರೆತಿದೆ.
  • ನೆಟ್‌ ಫ್ಲಿಕ್ಸ್‌ನ ‘ಗಿಲ್ಟಿ’ ಸಿನಿಮಾದ ಅತ್ಯುತ್ತಮ ನಟನೆಗಾಗಿ ಕಿಯಾರಾ ಅಡ್ವಾಣಿ ‘ವಿಮರ್ಶಕರ ಉತ್ತಮ ನಟಿ’ ಎನಿಸಿದ್ದಾರೆ.
  • ಸುಶಾಂತ್‌ ಸಿಂಗ್‌ ರಜಪೂತ್‌ ಅವರಿಗೆ ‘ಚಿಚೋರೆ’ ಯಲ್ಲಿನ ಅಭಿನಯಕ್ಕಾಗಿ ಮರಣೋತ್ತರವಾಗಿ ‘ವಿಮರ್ಶಕರ ಉತ್ತಮ ನಟ’ ಗೌರವ ಸಿಕ್ಕರೆ,
  • ವೆಬ್‌ ಸೀರಿಸ್‌ ವಿಭಾಗದಲ್ಲಿನ ‘ಉತ್ತಮ ನಟಿ’ ಪ್ರಶಸ್ತಿ “ಆರ್ಯ’ ಚಿತ್ರಕ್ಕಾಗಿ ಸುಶ್ಮಿತಾ ಸೇನ್‌ ಪಾಲಾಗಿದೆ.

ಪ್ರಶಸ್ತಿ ಪುರಸ್ಕೃತರು

  • ಉತ್ತಮ ನಟಿ: ದೀಪಿಕಾ ಪಡುಕೋಣೆ (ಚಪಾಕ್‌)
  • ಉತ್ತಮ ನಟ: ಅಕ್ಷಯ್‌ ಕುಮಾರ್‌ (ಲಕ್ಷ್ಮಿ)
  • ವಿಮರ್ಶಕರ ಉತ್ತಮ ನಟಿ: ಕಿಯಾರಾ ಅಡ್ವಾಣಿ (ಗಿಲ್ಟಿ).
  • ವಿಮರ್ಶಕರ ಉತ್ತಮ ನಟ: ಸುಶಾಂತ್‌ ಸಿಂಗ್‌ ರಜಪೂತ್‌ (ಚಿಚೋರೆ)

*ಉತ್ತಮ ಚಿತ್ರ: ತಾನಾಜಿ

  • ಉತ್ತಮ ವಿದೇಶಿ ಫೀಚರ್‌ ಚಿತ್ರ: ಪ್ಯಾರಾಸೈಟ್‌
  • ಉತ್ತಮ ನಿರ್ದೇಶಕ: ಅನುರಾಗ್‌ ಬಸು (ಲುಡೋ)
Copyright © All rights reserved Newsnap | Newsever by AF themes.
error: Content is protected !!