ಪ್ರೀತಿಸಿದವನ್ನು ವಿವಾಹ ಮಾಡಿ ಕೊಳ್ಳಲು ಅವಕಾಶ ಮಾಡಿಕೊಡದೇ ಬೇರೊಬ್ಬನ ಜೊತೆ ವಿವಾಹ ಮಾಡಿಸಿದ ಕಾರಣಕ್ಕಾಗಿ ತಂದೆ ,ತಾಯಿ ಸೇರಿದಂತೆ
ಕುಟುಂಬದ 7 ಮಂದಿಯನ್ನು
ಪ್ರಿಯಕರನ ನೆರವಿನಿಂದಿಗೆ ಊಟದಲ್ಲಿ ವಿಷ ಹಾಕಿ ನಂತರ ಕತ್ತು ಕೊಯ್ದ ಭೀಕರವಾಗಿ ಹತ್ಯೆ ಮಾಡಿ ಶಬನಂ ಹಾಗೂ ಪ್ರಿಯಕರ ಸಲೀಂಗೆ ಗಲ್ಲು ಶಿಕ್ಷೆ ಕಾಯಂ ಅಗಿದೆ
ಇದು ಉತ್ತರ ಪ್ರದೇಶದ ಅಮ್ರೋಹಾದ ಹಸನ್ಪುರ ಪಟ್ಟಣಕ್ಕೆ ಸಮೀಪದ ಬವಾಂಖೇಡಿ ಪಟ್ಟಣದಲ್ಲಿ ನಡೆದ ಘಟನೆ. ಕೊಲೆಪಾತಕಿ ಶಬನಂಗೆ ಸೆಷನ್ಸ್ ಕೋರ್ಟ್‌ನಿಂದ ಸುಪ್ರೀಂ ಕೋರ್ಟ್ ವರೆಗೂ ಗಲ್ಲುಶಿಕ್ಷೆಯೇ ಕಾಯಂ ಆಗಿದೆ.
ರಾಷ್ಟ್ರಪತಿಗಳ ಕ್ಷಮಾದಾನ ಅರ್ಜಿಯೂ ತಿರಸ್ಕೃತಗೊಂಡಿರುವ ಕಾರಣ, ಇದೀಗ ನೇಣಿಗೆ ಕೊರಳು ನೀಡಲು ಸಿದ್ಧವಾಗಿದ್ದಾಳೆ ಈ ಕೊಲೆಗಾತಿ.
ನೇಣುಗಂಬಕ್ಕೆ ಏರಿಸಲು ಮಥುರಾ ಜೈಲು ಸಕಲ ಸಿದ್ಧತೆ ನಡೆಸಿದೆ. ಕುತೂಹಲದ ಸಂಗತಿ ಎಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಗಲ್ಲುಶಿಕ್ಷೆ ಅನುಭವಿಸುತ್ತಿರುವ ಈಕೆ ಮೊದಲ ಮಹಿಳೆ.
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲಿಗೇರಿದ್ದ ಅಪರಾಧಿಗಳನ್ನು ನೇಣಿಗೇರಿಸಿದ್ದ ಪವನ್ ಜಲ್ಲದ್ ಶಬನಂ ಳನ್ನೂ ನೇಣಿಗೇರಿಸಲಿದ್ದಾರೆ. ಆಕೆಯನ್ನು ನೇಣಿಗೇರಿಸುವ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಶೀಘ್ರದಲ್ಲಿಯೇ ಡೆತ್‌ವಾರೆಂಟ್ ಜಾರಿಯಾಗಲಿರುವ ಕಾರಣದಿಂದ ಗಲ್ಲುಶಿಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
150 ವರ್ಷಗಳ ಹಿಂದೆ ಮಹಿಳೆ ಗಲ್ಲಾಗಿತ್ತು
ಮಥುರಾ ಜೈಲಿನಲ್ಲಿ 150 ವರ್ಷಗಳ ಹಿಂದೆ ಮೊದಲ ಮಹಿಳಾ ನೇಣುಗಂಬದ ಕೊಠಡಿಯನ್ನು ನಿರ್ಮಿಸಲಾಗಿತ್ತು. ಆದರೆ, ಸ್ವಾತಂತ್ರ್ಯ ಸಿಕ್ಕ ಬಳಿಕ ಇದುವರೆಗೂ ಯಾವ ಮಹಿಳಾ ಕೈದಿಯೂ ಗಲ್ಲುಶಿಕ್ಷೆಗೆ ಒಳಗಾಗಿಲ್ಲ. ಈ ಮೂಲಕ ಈಕೆ ಪ್ರಥಮ ಕೈದಿ ಎನಿಸಲಿದ್ದಾಳೆ. ಈಕೆಯ ಜತೆ ಈಕೆಯ ಪ್ರೇಮಿ ಸಲೀಂ ಕೂಡ ಗಲ್ಲುಶಿಕ್ಷೆಗೆ ಒಳಗಾಗಲಿದ್ದಾನೆ.
ಘಟನೆ ವಿವರ :
ಉತ್ತರ ಪ್ರದೇಶದ ಅಮ್ರೋಹಾದ ಹಸನ್ಪುರ ಪಟ್ಟಣಕ್ಕೆ ಸಮೀಪದ ಬವಾಂಖೇಡಿ ಎಂಬ ಗ್ರಾಮದ ಶಬನಂ 7 ಮಂದಿಯನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ
2008ರ ಏಪ್ರಿಲ್ 14 ಮತ್ತು 15ರ ಮಧ್ಯರಾತ್ರಿ ನಡೆಸಿದ ಘಟನೆ ಇದು.
ತನ್ನದೇ ಕುಟುಂಬದ 7 ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು ಈಕೆ. ಅಷ್ಟಕ್ಕೂ ಇಂಥದ್ದೊಂದು ಕೃತ್ಯ ಎಸಗಲು ಕಾರಣ, ಈಕೆಯ ಲವ್ ಸ್ಟೋರಿ.
ಮೊದಲೇ ಸಲೀಂ ಎಂಬಾತನನ್ನು ಪ್ರೀತಿಸುತ್ತಿದ್ದ ಈಕೆಯ ಮದುವೆ ಬೇರೆಯವರ ಜತೆ ಆಗಿತ್ತು ಆದರೆ ಮದುವೆಯಾದ ಮೇಲೂ ಸಲೀಂನನ್ನು ಪ್ರೀತಿಸುತ್ತಿದ್ದ ಶಬನಮ್ ತನ್ನ ಪ್ರಿಯಕರನ ಜತೆ ಸೇರಿ ತನ್ನ ಗಂಡನ ಮನೆಯ 7 ಜನರನ್ನು ಕೊಚ್ಚಿ ಕೊಲೆ ಮಾಡಿದ್ದಳು.
ಆಕೆಯ ಕುಟುಂಬದವರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ. ಕೊಲೆ ಮಾಡಿದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಶಬನಂ, ನಿರುದ್ಯೋಗಿ ಪ್ರೇಮಿ ಸಲೀಂ ಜತೆ ಸಂಚು ರೂಪಿಸಿ ಮನೆಯರಿಗೆ ಚಹಾದಲ್ಲಿ ಮತ್ತು ಬರಿಸುವ ಔಷಧ ಬೆರೆಸಿದ್ದಳು. ನಂತರ ಮನೆಗೆ ಬಂದ ಸಲೀಂ ಏಳು ಮಂದಿಯ ಕುತ್ತಿಗೆ ಸೀಳಿದ್ದ.
ಆದ್ದರಿಂದ ಈಕೆ ತಂದೆ ಮಾಸ್ಟರ್ ಶೌಕತ್, ತಾಯಿ ಹಶ್ಮಿ, ಸಹೋದರರಾದ ಅನೀಸ್ ಮತ್ತು ರಶೀದ್, ಅತ್ತಿಗೆ ಅಂಜುಮ್ ಮತ್ತು ಅವರ ಸಹೋದರಿ ರಬಿಯಾ ಹಾಗೂ ಸೋದರಳಿಯ ಅರ್ಶ್‌ನನ್ನು ಕೊಲೆ ಮಾಡಿದ್ದಳು. ಇದಕ್ಕೆ ಸಲೀಂ ಸಹಕರಿಸಿದ್ದ.
ಈ ಹಿನ್ನೆಲೆಯಲ್ಲಿ ಆಕೆಗೆ ಎಲ್ಲಾ ಕೋರ್ಟ್‌ಗಳೂ ಮರಣದಂಡನೆ ವಿಧಿಸಿದ್ದವು. ಸುಪ್ರೀಂಕೋರ್ಟ್ ಕೊನೆಗೆ ರಾಷ್ಟ್ರಪತಿ ಕ್ಷಮಾದಾನದ ವರೆಗೆ ಹೋದರೂ ಈಕೆಗೆ ಬಿಡುಗಡೆ ಸಿಗಲಿಲ್ಲ. ಮರಣದಂಡನೆಯೇ ಗತಿಯಾಯ್ತು. ಇದೀಗ ನೇಣುಗಂಬ ಸಿದ್ಧಗೊಂಡಿದೆ. ಈಕೆ ಮತ್ತು ಪ್ರೇಮಿಗಾಗಿ ಕಾದಿದೆ.
ಶಬನಂ, ಸಲೀಂಗೆ ಸಣ್ಣ ಮಗುವಿದೆ. ಇಬ್ಬರಿಗೂ ಗಲ್ಲುಶಿಕ್ಷೆಯಾದರೆ ಮಗು ಅನಾಥವಾಗುವುದು ಎಂದು ಪ್ರಕರಣದ ಅಮಿಕಸ್ ಕ್ಯೂರಿ ದುಷ್ಯಂತ್ ಪರಾಶರ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ವಾದವನ್ನು ಕೋರ್ಟ್ ಮಾನ್ಯ ಮಾಡಲಿಲ್ಲ.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ