January 11, 2025

Newsnap Kannada

The World at your finger tips!

rash ami

ಅಪ್ಪ-ಮಗಳು ಪಾತ್ರ : ರಶ್ಮಿಕಾ ಮಂದಣ್ಣ ಈಗ ಬಿಗ್ ಬಿ ಜೊತೆ ಆ್ಯಕ್ಟ್

Spread the love

ಕನ್ನಡದ ಕುವರಿ ರಶ್ಮಿಕಾ ಮಂದಣ್ಣನಿಗೆ ಬಾಲಿವುಡ್ ಆಫರ್ ಬಂದಿದೆ. ಬಿಗ್ ಬಿ ಜೊತೆ ನಟಿಸುವ ಅವಕಾಶ ಸಿಕ್ಕಿದೆ.

ಸಧ್ಯಕ್ಕೆ ಡೆಡ್ಲಿ ಹೆಸರಿನ ಈ ಹೊಸ ಚಿತ್ರ ದಲ್ಲಿ ಅಮಿತಾಬ್ ಬಚ್ಚನ್ ಜೊತೆ ಮಗಳ ಪಾತ್ರದಲ್ಲಿ ನಟಿಸಲು ಅವಕಾಶ ಬಂದಿದೆ.

ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ನಿರ್ಮಾಣ ಮಾಡುವ ಈ ಚಿತ್ರದಲ್ಲಿ ನೀನಾ‌ ಗುಪ್ತಾ ಕೂಡ ನಟಿಸಲಿದ್ದಾರೆ. ಮುಂದಿನ ಮಾಚ್ ೯ ನಿಂದ ವಿಕಾಸ್ ಹಬ್ಲ ನಿರ್ದೇಶನದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಬಾದ್ ಶಾ ಜೊತೆಗೆ ಈಗಾಗಲೇ ವಿಡಿಯೋ ಸಾಂಗ್ ನಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದ ರಶ್ಮಿಕಾ ಈಗ ಚಿತ್ರವೊಂದರಲ್ಲಿ ನಟನೆಗೆ ಅವಕಾಶ ಒದಗಿ ಬಂದಿದೆ.

ಕೊರೋನಾದಿಂದಾಗಿ ಚಿತ್ರಗಳು ಸೆಟ್ಟೇರುವುದೇ ಕಡಿಮೆ ಆಗಿರುವಾಗ ರಶ್ಮಿಕಾ ಗೆ ಕನ್ನಡದಲ್ಲಿ ಪೊಗರು ಚಿತ್ರದಲ್ಲಿ ನಟಿಸಿದ್ದಾರೆ. ಈಗ ಪುಷ್ಪ ಎಂಬ ಚಿತ್ರದಲ್ಲಿ ನಟಿಸುವ ಅವಕಾಶದ ನಡುವೆಯೂ ಹಿಂದಿ ಚಿತ್ರ ಈ ಆಫರ್ ರಶ್ಮಿಕಾ ಖುಷಿ ಕೊಟ್ಟಿದೆ.

Copyright © All rights reserved Newsnap | Newsever by AF themes.
error: Content is protected !!