February 21, 2026

Newsnap Kannada

The World at your finger tips!

cilender

ಬೆಂಗಳೂರಿನಲ್ಲಿ ಸಿಲಿಂಡರ್​ ಸ್ಫೋಟ; 7 ಮಂದಿಗೆ ಗಂಭೀರ ಗಾಯ

Spread the love

ಬೆಂಗಳೂರಿನ ಚಂದ್ರಲೇಔಟ್​ನ ಅತ್ತಿಗುಪ್ಪೆ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸುಕುಮಾರ (48), ಹರ್ಷ ( 41), ಗಾನಶ್ರೀ (13), ಹೇಮೇಶ್ವರ (7), ರಾಮಕ್ಕ (65),ಅನಿತಾ (31), ರಚನಾ (21) ಗಾಯಗೊಂಡಿದ್ದಾರೆ.

ಅಡುಗೆ ಮನೆಯಲ್ಲಿನ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಹರ್ಷಾ ಮನೆಗೆ ಬಂದಾಗ ಸಿಲಿಂಡರ್ ಸೋರಿಕೆ ಬಗ್ಗೆ ಗೊತ್ತಾಗಿ, ಗಾಬರಿಯಿಂದ ಹೊರಗೆ ಬಂದು ನೋಡಿದಾಗ ಸಿಲಿಂಡರ್ ಸ್ಫೋಟ ಸಂಭವಿಸಿದೆ.

ಸಿಲಿಂಡರ್ ಸೋರಿಕೆಯಿಂದ ದೇವರ ಕೋಣೆಯಲ್ಲಿ ಹಚ್ಚಿದ ದೀಪದೊಂದಿಗೆ ಬೆಂಕಿ ಹೊತ್ತಿಕೊಂಡಿದೆ, ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದೆ.


ಸದ್ಯ ಗಾಯಾಳುಗಳನ್ನು ವಿಕ್ಟೋರಿಯಾ ಮತ್ತು ಇಎಸ್ಐ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಚಂದ್ರ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!