January 28, 2026

Newsnap Kannada

The World at your finger tips!

cyber

ಸೈಬರ್ ಅಪರಾಧಗಳ ತಡೆಗೆ ಸೈಬರ್ ಭದ್ರತಾ ತಂತ್ರ ೨೦೨೦ – ಅಜಿತ್ ದೋವಲ್

Spread the love

ಹಲವು ದಿನಗಳಿಂದ ಚೀನಾವು ಭಾರತದ ಮೇಲೆ ತನ್ನ ಹದ್ದಿನ ಬೇಹುಗಣ್ಣುಳನ್ನು ಇಟ್ಟಿರುವುದು ನಮಗೆ ಗೊತ್ತಿರುವ ವಿಚಾರ. ಇಂದು ದೆಹಲಿಯ ಪೋಲೀಸರು ಭಾರತದಿಂದ ಚೀನಾಕ್ಕೆ ಮಾಹಿತಿ‌ ರವಾನಿಸುತ್ತಿದ್ದ ಒಬ್ಬ ನೇಪಾಳಿ ವ್ಯಕ್ತಿ ಹಾಗೂ ಒಬ್ಬ ಚೀನಿ ವ್ಯಕ್ತಿಯನ್ನು ಬಂಧಿಸಿದ್ದರು.
ಸೆಪ್ಟೆಂಬರ್‌ ಮೊದಲ ವಾರದಲ್ಲಿ‌ ರಾಷ್ಟ್ರೀಯ ಮಾಹಿತಿ ಸಂಸ್ಥೆಯ ಎಲ್ಲಾ ಮಾಹಿತಿಗಳು ಸೈಬರ್ ಅಪರಾಧದ ಮೂಲಕ ನಾಶವಾಗಿವೆ. ಹೀಗೆ ಸೈಬರ್ ಅಪರಾಧಗಳು ದಿನೇ ದಿನೇ ಭಾರತದಲ್ಲಿ ಹೆಚ್ಚುತ್ತಿವೆ‌.

ಇಂದು ರಾಷ್ಟ್ರೀಯ ಭದ್ರತಾ ದಳದ ಮುಖ್ಯಸ್ಥ ಅಜಿತ್ ದೋವಲ್‌ ದೇಶದಲ್ಲಿ ಸುಮಾರು ಶೇ ೫೦೦ ರಷ್ಟು ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳ ವರ್ಚುವಲ್ ಸೈಬರ್ ಸಮ್ಮೇಳನ ‘ಕೋಕಾನ್ ೨೦೨೦’ ರಲ್ಲಿ ಮಾತನಾಡಿರುವ ದೋವಲ್ ಅವರು ‘ಭಾರತದಲ್ಲಿ ಏರಿಕೆಯಾಗುತ್ತಿರುವ ಸೈಬರ್ ಅಪರಾಧಗಳನ್ನು ತಡೆಯಲು ಭಾರತ ಸರ್ಕಾರವು ಶೀಘ್ರದಲ್ಲೇ ಸೈಬರ್ ಭದ್ರತಾ ತಂತ್ರ – ೨೦೨೦ನ್ನು ಜಾರಿಗೆ ತರುತ್ತಿದೆ’ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ.

‘ದೇಶದಲ್ಲಿ ನಗದು ನಿರ್ವಹಣೆ ಕಡಿಮೆಯಾದ ನಂತರ ಎಲ್ಲ ಪಾವತಿಗಳು ಜಾಲತಾಣಗಳ ಮುಖಾಂತರವೇ ಆಗುತ್ತಿವೆ. ಜಾಲತಾಣಗಳಿಂದಲೇ ಹೆಚ್ಚಿನ ಮಾಹಿತಿ ಸೋರಿಕೆಯಾಗುತ್ತಿದೆ. ಅಲ್ಲದೇ ನಾಗರೀಕರು ಸೈಬರ್ ಅಪರಾಧದ ಬಗ್ಗೆ ಸೀಮಿತ ಅರಿವನ್ನು ಹೊಂದಿದ್ದಾರೆ’ ಎಂದು ಅವರು ಹೇಳಿದರು.

ರಾಷ್ಟ್ರೀಯ ಸೈಬರ್ ಭದ್ರತಾ ತಂತ್ರ – ೨೦೨೦ ಸೈಬರ್ ಸುರಕ್ಷತೆ, ನೈರ್ಮಲ್ಯ ಹಾಗೂ ಜಾಗೃತಿಗೆ ಆದ್ಯತೆ ನೀಡುವದಲ್ಲದೇ, ಈ ಮೂರು ಅಂಶಗಳಡಿ ಎಲ್ಲಾ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿದೆ.

error: Content is protected !!