ತುಮಕೂರು: ಸೈಬರ್ ಕಳ್ಳರು ವಂಚನೆಗೆ ಹೊಸ ತಂತ್ರವನ್ನು ಅಳವಡಿಸಿಕೊಂಡು, ಪೊಲೀಸ್ ಹುದ್ದೆಯ ವೇಷ ತೊಟ್ಟು, ವಿಡಿಯೋ ಕರೆ ಮೂಲಕ ಜನರನ್ನು ಹೆದರಿಸಿ ಹಣ ಪೀಕುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ನಗರದ ನಿವೃತ್ತ ಉಪನ್ಯಾಸಕರೊಬ್ಬರು ಈ ಮೋಸದ ಬಲೆಗೆ ಬಿದ್ದು ₹65 ಲಕ್ಷ ಕಳೆದುಕೊಂಡಿರುವುದಾಗಿ ವರದಿಯಾಗಿದೆ.
ಅ.16 ರಂದು ಎಂ.ಪಿ. ಶಂಕರಪ್ಪ ಎಂಬುವವರಿಗೆ ವಾಟ್ಸಾಪ್ ಮೂಲಕ ಮಹಾರಾಷ್ಟ್ರದ ಪೊಲೀಸ್ ಎಂದು ಪರಿಚಯಿಸಿದ ವಂಚಕರು, ‘ನಿಮ್ಮ ಹೆಸರು ಮಾನವ ಕಳ್ಳಸಾಗಾಣೆ ಪ್ರಕರಣದಲ್ಲಿ ಸಂಶಯಿತರ ಪಟ್ಟಿಯಲ್ಲಿದೆ, ಬಂಧನ ತಪ್ಪಿಸಲು ನಿಮಗೆ ಅವಕಾಶ ನೀಡಲಾಗುತ್ತಿದೆ’ ಎಂದು ಹೆದರಿಸಿದ್ದಾರೆ.
ಬಂಧನದಿಂದ ತಪ್ಪಿಸಿಕೊಳ್ಳಲು ನಿಮ್ಮ ಮನೆಯ ಮತ್ತು ಬ್ಯಾಂಕ್ ಖಾತೆಯ ದಾಖಲೆಗಳನ್ನು ತೋರಿಸಲು ಸೂಚನೆ ನೀಡಿದಾಗ, ಶಂಕರಪ್ಪ ಅವರು ಎಲ್ಲಾ ದಾಖಲಾತಿಗಳನ್ನು ವಿಡಿಯೋ ಕರೆಯಲ್ಲಿಯೇ ತೋರಿಸಿದ್ದಾರೆ. ಕಳ್ಳರು ನಂತರ ‘ನಿಮ್ಮ ಖಾತೆಯಲ್ಲಿನ ಹಣವನ್ನು ಸರ್ಕಾರದ ಖಾತೆಗೆ ಅಲ್ಪಾವಧಿಗೆ ಜಮಾ ಮಾಡಿ, ಬಳಿಕ ವಾಪಸ್ ಪಡೆಯಬಹುದು’ ಎಂದು ಹೇಳಿದ್ದು, ಅ.24 ರವರೆಗೆ ನಿರಂತರವಾಗಿ ಕರೆ ಮಾಡಿ ಒತ್ತಡ ಹೂಡಿದ್ದಾರೆ.
ಅ.25ರಂದು ಮತ್ತೊಮ್ಮೆ ಕರೆ ಮಾಡಿ ₹65 ಲಕ್ಷ ಹಣ ನೀಡುವಂತೆ ಒತ್ತಡ ಹಾಕಿದ್ದಾರೆ. ಆತಂಕಗೊಂಡ ಶಂಕರಪ್ಪ ಹಂತ ಹಂತವಾಗಿ ಸೈಬರ್ ಕಳ್ಳರು ತಿಳಿಸಿದ ಖಾತೆಗೆ ₹65,00,057 ಹಣ ವರ್ಗಾವಣೆ ಮಾಡಿದ್ದಾರೆ.ಇದನ್ನು ಓದಿ –ಮಂಡ್ಯದಲ್ಲಿ ಅಕ್ರಮ ಸಂಬಂಧಕ್ಕೆ ಯುವಕನ ಬರ್ಬರ ಕೊಲೆ
ಇದರಿಂದ ತೃಪ್ತಿ ಪಡದ ವಂಚಕರು ಮತ್ತೆ ₹50 ಲಕ್ಷ ಬೇಡಿಕೆ ಇಡುತ್ತಿದ್ದಂತೆ, ಶಂಕರಪ್ಪ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿದಾಗ ಇದು ವಂಚನೆ ಎಂಬುದು ತಿಳಿದುಬಂದಿದೆ. ತಕ್ಷಣವೇ ಅವರು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
More Stories
ಮೈಸೂರು: ಹೃದಯಾಘಾತದಿಂದ SSLC ವಿದ್ಯಾರ್ಥಿನಿ ಮೃತ್ಯು
ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
GBS ಸೋಂಕಿನಿಂದ ಮೊದಲ ಶಂಕಿತ ಸಾವು: ಪ್ರಕರಣಗಳ ಸಂಖ್ಯೆ 101ಕ್ಕೆ ಏರಿಕೆ