Trending

ಸಿ.ಎಸ್ .ಕೆ ಗೆ 10 ವಿಕೆಟ್ ಗಳ ಭರ್ಜರಿ ಜಯ

ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿದೆ‌. ಐಪಿಲ್ 13ನೇ ಸರಣಿಯ 18ನೇ ಪಂದ್ಯದಲ್ಲಿ‌ ಸಿಎಸ್‌ಕೆ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿದೆ.

ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ‌ ಪಂಜಾಬ್ ತಂಡ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನ ಪ್ರವೇಶಿಸಿದ ನಾಯಕ ಕೆ.ಎಲ್‌. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರ ಆಟ ಉತ್ತಮವಾಗಿಯೇನೋ ಆರಂಭವಾಯಿತು. ಆದರೆ ತಂಡದ ನಾಯಕ ರಾಹುಲ್ 52 ಎಸೆತಗಳಲ್ಲಿ‌ 63 ಹಾಗೂ ಮಯಾಂಕ್ 19 ಎಸೆತಗಳಿಗೆ 26 ರನ್ ಗಳಿಸಿದರು. ಇವರಿಬ್ಬರ ನಂತರ ಬಂದ ಪೂರನ್ 17 ಎಸೆತಗಳಲ್ಲಿ‌ ಮಿಂಚಿನ ಆಟವಾಡಿ 33 ರನ್ ಗಳಿಸಿದರೂ ಪಂಜಾಬ್ ಹಿನ್ನಡೆ ಅನುಭವಿಸಬೇಕಾಯ್ತು. ತಂಡ ಒಟ್ಟು 20 ಓವರ್‌ಗಳಲ್ಲಿ‌ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.

ಸಿಎಸ್‌ಕೆ ತಂಡ ಟಾರ್ಗೆಟ್‌ನ್ನು ತುಂಬಾ ಉತ್ಸಾಹದಿಂದಲೇ ತೆಗೆದುಕೊಂಡಿತು. ತಂಡ‌ದ ಆರಂಭಿಕ ಆಟಗಾರರು ಅಟವನ್ನು ಅಮೋಘ ಪ್ರಾರಂಭ ಮಾಡಿದರು. ಆರಂಭಿಕ‌ ಬ್ಯಾಟ್ಸ್‌ಮನ್‌ಗಳಾದ ಎಸ್. ವ್ಯಾಟ್ಸನ್ ಹಾಗೂ ಪಾಫ್ ಡು ಪ್ಲೆಸ್ಸಿಸ್ ಇಬ್ಬರ ಜೊತೆಯಾಟದಿಂದಲೇ ಚೆನ್ನೈ ಗೆದ್ದಿತು. ವ್ಯಾಟ್ಸನ್ 53 ಎಸೆತಗಳಲ್ಲಿ 83 ರನ್ ಹಾಗೂ ಪ್ಲೆಸ್ಸಿಸ್ 53 ಎಸೆತಗಳಲ್ಲಿ 87 ರನ್ ಗಳಿಸಿ ತಂಡ ಸೋಲಿನ ಸುಳಿಯಿಂದ ಹೊರಬರುವಂತೆ ಮಾಡಿದರು. ಒಟ್ಟು 17.4 ಓವರ್‌ಗಳಲ್ಲಿ 181 ರನ್ ಗಳಿಸಿತು. ಒಂದೇ ಒಂದು ವಿಕೆಟ್ ನಷ್ಟವಿಲ್ಲದೇ ಪಂದ್ಯದಲ್ಲಿ ಗೆದ್ದದ್ದು ಸಿಎಸ್‌ಕೆ ಹೆಗ್ಗಳಿಕೆ.

Team Newsnap
Leave a Comment
Share
Published by
Team Newsnap
Tags: #CSK

Recent Posts

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024