ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿದೆ. ಐಪಿಲ್ 13ನೇ ಸರಣಿಯ 18ನೇ ಪಂದ್ಯದಲ್ಲಿ ಸಿಎಸ್‌ಕೆ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿದೆ.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನ ಪ್ರವೇಶಿಸಿದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರ ಆಟ ಉತ್ತಮವಾಗಿಯೇನೋ ಆರಂಭವಾಯಿತು. ಆದರೆ ತಂಡದ ನಾಯಕ ರಾಹುಲ್ 52 ಎಸೆತಗಳಲ್ಲಿ 63 ಹಾಗೂ ಮಯಾಂಕ್ 19 ಎಸೆತಗಳಿಗೆ 26 ರನ್ ಗಳಿಸಿದರು. ಇವರಿಬ್ಬರ ನಂತರ ಬಂದ ಪೂರನ್ 17 ಎಸೆತಗಳಲ್ಲಿ ಮಿಂಚಿನ ಆಟವಾಡಿ 33 ರನ್ ಗಳಿಸಿದರೂ ಪಂಜಾಬ್ ಹಿನ್ನಡೆ ಅನುಭವಿಸಬೇಕಾಯ್ತು. ತಂಡ ಒಟ್ಟು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.
ಸಿಎಸ್‌ಕೆ ತಂಡ ಟಾರ್ಗೆಟ್‌ನ್ನು ತುಂಬಾ ಉತ್ಸಾಹದಿಂದಲೇ ತೆಗೆದುಕೊಂಡಿತು. ತಂಡದ ಆರಂಭಿಕ ಆಟಗಾರರು ಅಟವನ್ನು ಅಮೋಘ ಪ್ರಾರಂಭ ಮಾಡಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಎಸ್. ವ್ಯಾಟ್ಸನ್ ಹಾಗೂ ಪಾಫ್ ಡು ಪ್ಲೆಸ್ಸಿಸ್ ಇಬ್ಬರ ಜೊತೆಯಾಟದಿಂದಲೇ ಚೆನ್ನೈ ಗೆದ್ದಿತು. ವ್ಯಾಟ್ಸನ್ 53 ಎಸೆತಗಳಲ್ಲಿ 83 ರನ್ ಹಾಗೂ ಪ್ಲೆಸ್ಸಿಸ್ 53 ಎಸೆತಗಳಲ್ಲಿ 87 ರನ್ ಗಳಿಸಿ ತಂಡ ಸೋಲಿನ ಸುಳಿಯಿಂದ ಹೊರಬರುವಂತೆ ಮಾಡಿದರು. ಒಟ್ಟು 17.4 ಓವರ್‌ಗಳಲ್ಲಿ 181 ರನ್ ಗಳಿಸಿತು. ಒಂದೇ ಒಂದು ವಿಕೆಟ್ ನಷ್ಟವಿಲ್ಲದೇ ಪಂದ್ಯದಲ್ಲಿ ಗೆದ್ದದ್ದು ಸಿಎಸ್‌ಕೆ ಹೆಗ್ಗಳಿಕೆ.
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು