ಐಪಿಎಲ್ 20-20ಯ 51ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 9 ವಿಕೆಟ್‌ಗಳ ಅದ್ಭುತ ಜಯ ಸಾಧಿಸಿತು.
ದುಬೈನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಪಂಜಾಬ್ ತಂಡದಿಂದ ಆರಂಭಿಕ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾಗಿ ಕೆ. ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೈದಾನಕ್ಕಿಳಿದು ಆಟಕ್ಕೆ ಸಾಧಾರಣ ಆರಂಭವನ್ನೊದಗಿಸಿತು. ರಾಹುಲ್ 27 ಎಸೆತಗಳಿಗೆ 29 ರನ್ ಹಾಗೂ ಅಗರ್ವಾಲ್ 15 ಎಸೆತಗಳಿಗೆ 26 ರನ್ ಗಳಿಸಿದರು. ಆದರೆ ತಂಡದ ಮೊತ್ತ ಏರಿಕೆಯಾಗಲು ನಿಜವಾಗಲೂ ಶ್ರಮಿಸಿದ್ದು, ಡಿ. ಹೂಡಾ. ಹೂಡಾ ಅವರು 30 ಎಸೆತಗಳಿಗೆ 62 ರನ್‌ಗಳ ಮೊತ್ತವನ್ನು ತಂಡಕ್ಕೆ ನೀಡಿದರು. ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.
ಇತ್ತ ಪ್ರತಿಯಾಟಕ್ಕೆ ಮೈದಾನಕ್ಕಿಳಿದ ಸಿಎಸ್‌ಕೆ ತಂಡದಿಂದ ಆರ್. ಗಾಯಕ್ವಾಡ್ ಹಾಗೂ ಫಾಫ್ ಡು ಪ್ಲೆಸ್ಸಿಸ್ ಕ್ರೀಸ್‌ಗೆ ಬಂದರು. ಗಾಯಕ್ವಾಡ್ 49 ಎಸೆತಗಳಿಗೆ 62 ರನ್ ಗಳಿಸಿದರೆ, ಪ್ಲೆಸ್ಸಿಸ್ 34 ಎಸೆತಗಳಿಗೆ 48 ರನ್ ಗಳಿಸಿದರು. ನಂತರ ಬಂದ ಅಂಬಾಟಿರಾಯುಡು ಅವರು 30 ಎಸೆತಗಳಿಗೆ 30 ರಬ್ ಗಳಿಸುವ ಮೂಲಕ ತನಮಡವನ್ನು ಜಯಶಾಲಿಯಾಗಿಸಿದರು. ಸಿಎಸ್‌ಕೆ ತಂಡ 18.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಪಂದ್ಯದಲ್ಲಿ ವಿಜಯಿಯಾಯಿತು.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು