December 23, 2024

Newsnap Kannada

The World at your finger tips!

police 1

ಆಟೋ ಡಿಕ್ಕಿ ತಪ್ಪಿಸಲು ಹೋಗಿ ಕ್ರೂಸರ್ ಪಲ್ಟಿ; ಇಬ್ಬರು ಸಾವು

Spread the love

ಶಿವಮೊಗ್ಗದ ಹೊರವಲಯದ ಗೋಂದಿ ಚಟ್ನಹಳ್ಳಿಯ ಬಳಿ ಆಟೋಕ್ಕೆ ಡಿಕ್ಕಿಹೋಡೆಯುವುದನ್ನು  ತಪ್ಪಿಸಲು ಹೋಗಿ ಕ್ರೂಸರ್​ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.

ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಕ್ರೂಸರ್​ ವಾಹನ ಆಟೋಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋದ ಕಾರಣ ಕ್ರೂಸರ್​ ವಾಹನ ಪಲ್ಟಿಯಾಗಿದೆ.

ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನದಲ್ಲಿದ್ದ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!