ಕೃಷ್ಣ ನದಿ ದಡದಲ್ಲಿ ನೀರು ಕುಡಿಯಲು ಹೋಗಿದ್ದ ಬಾಲಕನನ್ನು ಎಳೆದುಕೊಂಡು ಹೋಗಿದ್ದ ಮೊಸಳೆ ಆತನನ್ನು ಕೊಂದು ತಿಂದಿದೆ.
ರಾಯಚೂರು ಜಿಲ್ಲೆಯ ಡೊಂಗ ರಾಮಪುರ ಗ್ರಾಮದ ಮಲ್ಲಿಕಾರ್ಜುನ (12) ಎಂಬ ಬಾಲಕನೇ ಬಲಿ ಯಾಗಿದ್ದಾನೆ.
ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತನ್ನ ಐವರು ಗೆಳೆಯರೊಂದಿಗೆ ಕೃಷ್ಣ ನದಿ ತೀರಕ್ಕೆ ನೀರು ಕುಡಿಯಲು ಹೋದಾಗ ಮಲ್ಲಿಕಾರ್ಜುನನನ್ನು ಮೊಸಳೆ ಎಳೆದುಕೊಂಡು ಹೋಗಿತ್ತು. ನಿನ್ನೆ ಸಂಜೆಯವರೆಗೂ ಬಾಲಕನಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಮಧ್ಯರಾತ್ರಿ ನಂತರ ಬಾಲಕನ ರುಂಡ ನದಿಯಲ್ಲಿ ತೇಲಿ ದಡಕ್ಕೆ ಬಂದು ಸೇರಿದ ನಂತರ ಬಲಿಯಾಗಿರುವುದು ದೃಢವಾಗಿದೆ.
ಬಾಲಕ ಸಾವಿಗೆ ಕುಟುಂಬದವರ ರೋಧನ ಹೆಚ್ಚಾಗಿದೆ. ಕೃಷ್ಣ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಹಲವು ಬಾರಿ ದೂರು ನೀಡಿದರೂ ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿದೆ.
- ಮಂಗಳೂರಿನಲ್ಲಿ ಬಾಲಕಿಗೆ ಸಾಮೂಹಿಕ ಅತ್ಯಾಚಾರ – ಮೂವರಿಗೆ ಜೀವಾವಧಿ ಶಿಕ್ಷೆ
- ಥಿಯೇಟರ್ ಮಾಲೀಕನನ್ನು ಕಟ್ಟಿಹಾಕಿ ಮನೆಯ ಕೆಲಸದವರಿಂದ ಕಳ್ಳತನ – ದಂಪತಿ ಬಂಧನ
- ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
- ಮುಂದಿನ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ: ಸಿಎಂ ಸಿದ್ದರಾಮಯ್ಯ
- ವಕ್ಫ್ ಭೂ ವಿವಾದದ ಕಲೆ ಈಗ ಲಾಲ್ ಬಾಗ್ ಉದ್ಯಾನವನದ ಮೇಲೂ!
More Stories
ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
ವಕ್ಫ್ ಭೂ ವಿವಾದದ ಕಲೆ ಈಗ ಲಾಲ್ ಬಾಗ್ ಉದ್ಯಾನವನದ ಮೇಲೂ!
ಮಂಡ್ಯ: ಡಿಸಿ, ಎಸ್ಪಿ ಕಚೇರಿಗಳ ಸಮೀಪದಲ್ಲಿ ಗಾಂಜಾ ಗಿಡಗಳು ಪತ್ತೆ!