December 21, 2024

Newsnap Kannada

The World at your finger tips!

721e5135 d1d7 4391 b74c 7511ad2c72a8

ಬಿಬಿಎಂಪಿ ಯೋಜನೆಗೆ ಇನ್ಮುಂದೆ ರಾಜಕಾರಣಿಗಳ ಫೋಟೊ ಹಾಕಿದರೆ ಕ್ರಿಮಿನಲ್‌ ಕೇಸ್!

Spread the love

ಬಸ್ ನಿಲ್ದಾಣಗಳು, ಸಾರ್ವಜನಿಕ ಶೌಚಾಲಯಗಳು, ನೀರಿನ ಘಟಕಗಳ ಮೇಲೆ ರಾರಾಜಿಸುತ್ತಿದ್ದ ರಾಜಕೀಯ ನಾಯಕರ ಭಾವಚಿತ್ರಗಳಿಗೆ ಬ್ರೇಕ್ ಸಿಗಲಿದೆ. ಇಂತಹ ಫೋಟೊ ಹಾಕುವುದು ಅಥವಾ ಸಾರ್ವಜನಿಕ ಸ್ಥಳಗಳ ವಿರೂಪಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ. 

ಎಂಟು ವಲಯಗಳ ಜಂಟಿ ಆಯುಕ್ತರುಗಳು ಮತ್ತು ಮುಖ್ಯ ಎಂಜಿನಿಯರ್‌ಗಳಿಗೆ ಈ ರೀತಿಯ ಫೋಟೊ ಹಾಕುವವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ ಅವರ ದೂರಿನ ಆಧಾರದ ಮೇಲೆ ಕ್ರಮ ಕೈಗೊಂಡಿರುವ ಆಯುಕ್ತ ಮಂಜುನಾಥ್‌ ಪ್ರಸಾದ್, ಈಗಾಗಲೇ ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ಧಾಣ, ಶೌಚಾಲಯ ಹಾಗೂ ನೀರಿನ ಘಟಕಗಳ ಮೇಲೆ ಹಾಕಿರುವ ಚುನಾಯಿತ ಪ್ರತಿನಿಧಿಗಳ ಫೋಟೋಗಳನ್ನು ತೆಗೆದುಹಾಕುವಂತೆ ಇದೆ ವೇಳೆ ಜಂಟಿ ಆಯುಕ್ತರು ಮತ್ತು ಮುಖ್ಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ. 

ಪಾಲಿಕೆ ಒದಗಿಸಿದ ಅಭಿವೃದ್ಧಿ ಯೋಜನೆಗಳು ಮತ್ತು ಸೌಕರ್ಯಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಚುನಾಯಿತ ಪ್ರತಿನಿಧಿಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲು ಯಾವುದೇ ಅವಕಾಶವಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಎಲ್ಲದರೂ ಈ ರೀತಿಯ ಉಲ್ಲಂಘನೆ ನಡೆದರೆ, ಪೊಲೀಸ್ ಠಾಣೆಯಲ್ಲಿ 1981 ರ ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪಗೊಳಿಸುವಿಕೆ ತಡೆಗಟ್ಟುವಿಕೆ) ಕಾಯ್ದೆಯಡಿ ಕ್ರಿಮಿನಲ್ ದೂರು ದಾಖಲಿಸುವಂತೆ ಅವರು ಜಂಟಿ ಆಯುಕ್ತರುಗಳು ಹಾಗೂ ಇಂಜಿನಿಯರ್‌ಗಳಿಗೆಗಳಿಗೆ ನಿರ್ದೇಶನ ನೀಡಿದ್ದಾರೆ. 

Copyright © All rights reserved Newsnap | Newsever by AF themes.
error: Content is protected !!