January 11, 2025

Newsnap Kannada

The World at your finger tips!

b37c3e67 99ad 4e32 87db 9b9a8edc7441 1

ದೀಪಾವಳಿಗೆ ಪಟಾಕಿ ಬ್ಯಾನ್: ಸಿಎಂ

Spread the love

ರಾಜ್ಯದಲ್ಲಿ  ಕೊರೋನಾ ಹರಡುತ್ತಿರುವ ಹಿನ್ನೆಲೆ ಈ ಬಾರಿ ದೀಪಾವಳಿ ಹಬ್ಬದಂದು ಪಟಾಕಿಯನ್ನು ನಿಷೇಧ ಮಾಡಲಾಗಿದೆ.

ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಮಾಹಿತಿ ನೀಡಿದ್ದಾರೆ.  ರಾಜ್ಯದಲ್ಲಿ ದೀಪಾವಳಿ ವೇಳೆ ಪಟಾಕಿ ಹಚ್ಚುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ನಿಷೇಧ ವಿಧಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದ ಈ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಹಬ್ಬಹರಿದಿನಗಳನ್ನು ಸರಳವಾಗಿ ಆಚರಿಸುವಂತೆ ಸರ್ಕಾರ ಈಗಾಗಲೇ ಆದೇಶಿಸಿದೆ.

ಈ ಮಧ್ಯೆ ನಾಡಹಬ್ಬ ದಸರಾವನ್ನು ಸಹ ಸರ್ಕಾರ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಿದೆ. ಇದೀಗ ದೀಪಾವಳಿ ವೇಳೆ ಪಟಾಕಿ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ.

Copyright © All rights reserved Newsnap | Newsever by AF themes.
error: Content is protected !!