January 11, 2025

Newsnap Kannada

The World at your finger tips!

vidhana sooudha

ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರ

Spread the love

ಗೋ ಹತ್ಯೆ ನಿಷೇಧ ವಿಧೇಯಕವು ಬುಧವಾರ ವಿರೋಧ ಪಕ್ಷದವರು ವಿರೋಧದ ನಡುವೆಯೂ ಅಂಗೀಕಾರ ವಾಗಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸದನದಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸಿ ಅಂಗೀಕಾರ ಮಾಡೇ ತೀರುತ್ತೇವೆ ಎಂದು ತಿಳಿಸಿದ್ದರು. ಅದರಂತೆಯೇ ಇಂದು ವಿಧಾನಸಭೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾನ್ ಮಂಡಿಸಿದರು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧದ ಮಧ್ಯೆಯೂ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರಗೊಂಡಿದೆ.

ಪ್ರಾಣಿಗಳ ಹತ್ಯೆ ಹೆಸರಿನಲ್ಲಿ ನಿಷೇಧ ಹೇರುವ ಹೆಸರಿನಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸಲ್ಪಟ್ಟಿದೆ. ಪಶು ಸಂಗೋಪಾನಾ ಸಚಿಪ ಪ್ರಭು ಚೌವ್ಹಾಣ್ ಸದನದಲ್ಲಿ ಮಂಡಿಸಿದ ವಿಧೇಯಕವನ್ನು ಹೆಸರನ್ನು ಸದನದ ಭಾವಿಗೆ ಇಳಿದು, ಕಾಂಗ್ರೆಸ್, ಜೆಡಿಎಸ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಾವು ನಾಳೆ ಹೊಸ ಬಿಲ್ ಗಳನ್ನು ಪಾಸ್ ಮಾಡ ಅವಕಾಶ ಕೊಡುವುದಿಲ್ಲ ಅಂತ ಹೇಳಿದ್ದೆವು. ಅದರಂತರ ಹೊಸ ಬಿಲ್ ಗಳನ್ನು ಹೊರತಾಗಿ ಬೇರೆ ಬಿಲ್ ಗಳನ್ನು ತಿದ್ದುಪಡಿ ಮಾಡಿಕೊಡುತ್ತೇವೆ. ನಾನು ಈ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತ ಪಡಿಸುವುದಾಗಿ ಹೇಳಿದರು.
ಕೊನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತಕ್ಕೆ ಹಾಕಿದರು. ಈ ವೇಳೆ ಪ್ರತಿಪಕ್ಷಗಳು ಸದನದ ಭಾವಿಗಿಳಿದು ವಿರೋಧ ವ್ಯಕ್ತಪಡಿಸಿದವು. ಇದರ ಮಧ್ಯೆಯೂ ಗೋ ಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಅಂಗೀಕಾರವಾಗಿದೆ.

ಆದರೂ ಇಂತಹ ತೀವ್ರ ವಿರೋಧ, ಗದ್ದಲದ ನಡುವೆಯೂ ಗೋಹತ್ಯೆ ನಿಷೇಧ ವಿಧೇಯ ವಿಧಾನಸಭೆಯಲ್ಲಿ ಮಂಡನೆಯಾಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತಕ್ಕೆ ಹಾಕಿದರು. ಈ ವೇಳೆ ಪ್ರತಿಪಕ್ಷಗಳು ಸದನದ ಭಾವಿಗಿಳಿದು ವಿರೋಧ ವ್ಯಕ್ತಪಡಿಸಿದವು. ಇದರ ಮಧ್ಯೆಯೂ ಗೋ ಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಅಂಗೀಕಾರವಾಗಿದೆ.

Copyright © All rights reserved Newsnap | Newsever by AF themes.
error: Content is protected !!