December 25, 2024

Newsnap Kannada

The World at your finger tips!

covidVaccine

ಕೊವಿಶೀಲ್ಡ್, ಕೋವ್ಯಾಕ್ಸಿನ್ – ಕೊರೋನಾಗೆ ಸಿಕ್ತು ಮದ್ದು : ತುರ್ತು ಬಳಕೆಗೆ ಗ್ರೀನ್ ಸಿಗ್ನಲ್

Spread the love

ತಜ್ಞರ ಸಮಿತಿ ಷರತ್ತುಗಳೇನು?

  • 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು
  • ಇಂಜೆಕ್ಷನ್ ರೂಪದಲ್ಲಿ ಮಾನವನ ದೇಹಕ್ಕೆ ಔಷಧಿ ಸೇರಿಸಬೇಕು
  • ಕ್ಲಿನಿಕಲ್ ಟ್ರಯಲ್ಸ್‍ನಲ್ಲಿ ಬಯಲಾಗುವ ಭದ್ರತೆ, ಸುರಕ್ಷತೆ,ಸಾಮರ್ಥ್ಯಕ್ಕೆ ಸಂಬಂಧಿಸಿದ ದತ್ತಾಂಶ ಸಲ್ಲಿಸಬೇಕು
  • ಲಸಿಕೆ ಹಾಕಿದ ಬಳಿಕ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ 15 ದಿನಕ್ಕೊಮ್ಮೆ ವರದಿ ನೀಡಬೇಕು.

ಕೋವಿಶೀಲ್ಡ್ ಮತ್ತು ದೇಶಿಯ ಲಸಿಕೆ ಕೋವ್ಯಾಕ್ಸಿನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಷರತ್ತು ಬದ್ಧ ಅನುಮತಿ ನೀಡಿದೆ.

ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ(ಡಿಸಿಜಿಐ) ಅಧ್ಯಕ್ಷ ವಿ.ಸೋಮಾನಿ ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿ,
ಎರಡು ಲಸಿಕೆಗಳ ಬಳಕೆಗೆ ಹಸಿರು ನಿಶಾನೆ ತೋರಿಸಿದೆ

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‍ನಿಂದ ಹೆಚ್ಚಿನ ಮಾಹಿತಿಯನ್ನು ವಿಷಯ ತಜ್ಞರ ಸಮಿತಿ (ಎಸ್‍ಇಸಿ) ಕೇಳಿತ್ತು. ಇದನ್ನು ಭಾರತ್ ಬಯೋಟೆಕ್ ಕೂಡಲೇ ಒದಗಿಸಿದ ಹಿನ್ನೆಲೆಯಲ್ಲಿ ಶನಿವಾರದ ತುರ್ತು ಸಭೆ ಸೇರಿದ ತಜ್ಞರು, ಕೊವ್ಯಾಕ್ಸಿನ್‍ಗೂ ಷರತ್ತುಬದ್ಧ ಒಪ್ಪಿಗೆ ನೀಡಲು ಮುಂದಾಗಿರುವುದಾಗಿ ಹೇಳಿದರು.

ಲಸಿಕೆ ಉತ್ಪಾದಕ ಸಂಸ್ಥೆಗಳು ಮಾರ್ಕೆಟ್ ಅಧೀಕೃತ ಅನುಮತಿ, ಉತ್ಪಾದನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಿವೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಕೊವಿಶೀಲ್ಡ್ ವ್ಯಾಕ್ಸಿನ್ ಹೇಗಿದೆ?:

  • ಬ್ರಿಟನ್‍ನ ಆಕ್ಸ್‍ಫರ್ಡ್ ವಿವಿಯ ಆಸ್ಟ್ರಾಜೆನಿಕಾ ಜೊತೆ ಕೈ ಜೋಡಿಸಿ ಪುಣೆಯ ಸೆರಂ ಇನ್ಸ್‍ಟಿಟ್ಯೂಟ್ ಕೊವಿಶೀಲ್ಡ್ ಲಸಿಕೆಯನ್ನು ಸಿದ್ಧಪಡಿಸಿದೆ. ಕೊವಿಶೀಲ್ಡ್ ವ್ಯಾಕ್ಸಿನ್ ಬಹಳಷ್ಟು ಸುರಕ್ಷಿತವಾಗಿದೆ. ದೇಶದಲ್ಲಿ ದೊಡ್ಡ ಜನ ಸಮೂಹದ ಮೇಲೆ ಪ್ರಯೋಗ ನಡೆದಿದೆ. ಲಸಿಕೆ ಪಡೆದವರಿಗೆ ಈವರೆಗೂ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಇತರೆ ವ್ಯಾಕ್ಸಿನ್‍ಗಳಿಗೆ ಹೋಲಿಸಿದ್ರೆ ಕೊವಿಶೀಲ್ಡ್ ಅಗ್ಗವಾಗಿದ್ದು, ಸರ್ಕಾರದಿಂದ ಪಡೆದರೆ 440 ರೂಪಾಯಿಗೆ ಸಿಗಲಿದೆ. ಖಾಸಗಿ ಮಾರುಕಟ್ಟೆಯಲ್ಲಿ 1 ಡೋಸ್‍ಗೆ 700-800 ರೂ. ಇರಲಿದೆ.
ಕೋವ್ಯಾಕ್ಸಿನ್ ಹೇಗಿರಲಿದೆ:
  • 2ನೇದಾಗಿ ಆತ್ಮನಿರ್ಭರ್ ಭಾರತ ಅಭಿಯಾನಕ್ಕೆ ಪುಷ್ಟಿ ಎಂಬಂತೆ ಐಸಿಎಂಆರ್ ಸಹಯೋಗದಲ್ಲಿ ಹೈದ್ರಾಬಾದ್‍ನ ಶಮೀರ್‍ಪೇಟ್‍ನ ಜಿನೋಂ ವ್ಯಾಲಿಯಲ್ಲಿ ಸ್ವದೇಶಿ ಲಸಿಕೆ ಸಿದ್ಧವಾಗುತ್ತಿದೆ. ಕೊವ್ಯಾಕ್ಸಿನ್ ಲಸಿಕೆ ನವೆಂಬರ್ ಮಧ್ಯಭಾಗದಿಂದ 3ನೇ ಹಂತದ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಸುರಕ್ಷತೆ, ಪರಿಣಾಮಕಾರಿ ಬಗ್ಗೆ ಸದ್ಯಕ್ಕೆ ಅಸ್ಪಷ್ಟವಾಗಿದ್ದು, ಅಗತ್ಯ 26 ಸಾವಿರ ಅಭ್ಯರ್ಥಿಗಳ ಪೈಕಿ 23 ಸಾವಿರ ಜನರ ಮೇಲೆ ಪ್ರಯೋಗ ನಡೆಸಲಾಗಿದೆ.‌ ತಜ್ಞರ ಸಮಿತಿ ಷರತ್ತುಗಳೇನು?
  • 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು
  • ಇಂಜೆಕ್ಷನ್ ರೂಪದಲ್ಲಿ ಮಾನವನ ದೇಹಕ್ಕೆ ಔಷಧಿ ಸೇರಿಸಬೇಕು
  • ಕ್ಲಿನಿಕಲ್ ಟ್ರಯಲ್ಸ್‍ನಲ್ಲಿ ಬಯಲಾಗುವ ಭದ್ರತೆ, ಸುರಕ್ಷತೆ,ಸಾಮರ್ಥ್ಯಕ್ಕೆ ಸಂಬಂಧಿಸಿದ ದತ್ತಾಂಶ ಸಲ್ಲಿಸಬೇಕು
  • ಲಸಿಕೆ ಹಾಕಿದ ಬಳಿಕ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ 15 ದಿನಕ್ಕೊಮ್ಮೆ ವರದಿ ನೀಡಬೇಕು.

Copyright © All rights reserved Newsnap | Newsever by AF themes.
error: Content is protected !!