November 24, 2024

Newsnap Kannada

The World at your finger tips!

virat 1

ವಿರಾಟ್ ಕೊಹ್ಲಿಗೆ ಕೋವಿಡ್ ಪಾಸಿಟೀವ್ : ಇಂಗ್ಲೆಂಡ್ ಪಂದ್ಯಕ್ಕೆ ಅಲಭ್ಯ ?

Spread the love

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಯುಕೆಗೆ ಬಂದಿಳಿದ ನಂತರ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ

ಈ ಸಂಗತಿ ಟೀಮ್‌ ಇಂಡಿಯಾಕ್ಕೆ ದೊಡ್ಡ ಆಘಾತವಾಗಿದೆ. ವಿರಾಟ್ ಕೊಹ್ಲಿ ತಮ್ಮ ಮಾಲ್ಡೀವ್ಸ್ ಪ್ರವಾಸ ಮುಗಿಸಿಕೊಂಡು ಬಂದ ನಂತರ ಅವರಿಗೆ ಕರೋನ ಸೋಂಕು ಇರೋದು ಧೃಡಪಟ್ಟಿದೆ ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ -HDK

ಟೀಮ್‌ ಇಂಡಿಯಾಕ್ಕೆ ಕೊಹ್ಲಿ ಪ್ರಮುಖ ಸದಸ್ಯರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಎನ್ನುವ ಭೀತಿ ಕೂಡ ಕಾಡುತ್ತಿದೆ. ಆದರೆ ಇಂಗ್ಲೆಂಡ್‌ ವಿರುದ್ದ ಟೆಸ್ಟ್ ಸರಣಿಗೆ ಇನ್ನೂ ಸಮಯವಿದೆ ಮತ್ತು ಕೊಹ್ಲಿ ಬೇಗ ಗುಣಮುಖರಾಗಲಿದ್ದಾರೆ ಅಂತ ತಿಳಿದು ಬಂದಿದೆ. ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ : 255 ಮಂದಿ ಸಾವು, 500ಕ್ಕೂ ಹೆಚ್ಚು ಮಂದಿಗೆ ಗಾಯ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಜುಲೈ 1 ರಿಂದ 5 ರವರೆಗೆ ಬರ್ಮಿಂಗ್ಹ್ಯಾಮ್ ನ ಎಡ್ಜ್ಬಾಸ್ಟನ್ ನಲ್ಲಿ ಆರಂಭವಾಗಲಿದೆ.

ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ -HDK

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು

ಸುದ್ದಿಗಾರರ ಜೊತೆ ಮಾತನಾಡಿದ ಕಿಮಾರಸ್ವಾಮಿ ಬೊಮ್ಮಾಯಿ ವಿರುದ್ಧ ಕಿಡಿಕಾರಿ, ಕೀ ಇರೋದೆ ಬೇರೆ ಕಡೆ. ಪಾಪ ಅವರೇನು ಮಾಡ್ತಾರೆ? ಅವರ ಬಗ್ಗೆ ನನಗೆ ಕನಿಕರ ಇದೆ. ಸ್ವತಂತ್ರವಾಗಿ ಸಿಎಂ ಅಧಿಕಾರ ನಡೆಸಲು ಆಗುತ್ತಿಲ್ಲ ಎಂದರು

ಬೊಮ್ಮಾಯಿ ಸ್ವಾತಂತ್ರ್ಯವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಕೂಡ ಕೇಶವಕೃಪಾದಿಂದ ಬರಬೇಕು. ಅಲ್ಲಿಂದ ಬರೋದೇ ಅಂತಿಮ ನಿರ್ಧಾರ. ಇವತ್ತು ಹಂತ ಹಂತವಾಗಿ ದೇಶದಲ್ಲಿ ಮನು ಸಂಸ್ಕೃತಿ ವಾತಾವರಣ ನಿರ್ಮಿಸಲು ಹೊರಟಿದ್ದಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ವಿರೋಧ ಪಕ್ಷಗಳು ಮೊದಲು ಈ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು

Copyright © All rights reserved Newsnap | Newsever by AF themes.
error: Content is protected !!