ನಟಿ ಅನು ಪ್ರಭಾಕರ್ಗೆ ಕೋವಿಡ್ ಪಾಸಿಟಿವ್ ಆಗಿದೆ. ನಿನ್ನೆ ಟ್ವೀಟ್ ಮಾಡುವ ಮೂಲಕ ಈ ವಿಷಯವನ್ನು ಬಹಿರಂಗ ಪಡಿಸಿದ್ದರು.
ತಾವು ಚಿಕಿತ್ಸೆ ಪಡೆಯುತ್ತಿರೋದಾಗಿ ಹೇಳಿ ಐಸೋಲೇಟ್ ಆಗಿರೋದಾಗಿ ತಿಳಿಸಿದ್ದರು. ಇದೀಗ ಮತ್ತೊಂದು ಟ್ವೀಟ್ ಮಾಡುವ ಮೂಲಕ ಸರ್ಕಾರದ ನಡೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಕೋವಿಡ್ ತಗುಲಿ 5 ದಿನಗಳಾದರೂ ನಟಿ ಅನು ಪ್ರಭಾಕರ್ಗೆ ಬಿಯು ನಂಬರ್ ಸಿಕ್ಕಿಲ್ಲ. ಕೋವಿಡ್ ವಾರ್ ವೆಬ್ ಸೈಟ್ನಲ್ಲೂ ರಿಪೋರ್ಟ್ ಇಲ್ಲ. ಬಿಬಿಎಂಪಿಯಿಂದ ಕರೆ ಕೂಡ ಬಂದಿಲ್ಲ ಅಂತ ಅನು ಪ್ರಭಾಕರ್ ಟ್ವೀಟ್ನಲ್ಲಿ ತಿಳಸಿದ್ದಾರೆ.
ಈ ಬಗ್ಗೆ ಬೇಸರ ಹಂಚಿಕೊಂಡಿರುವ ಅನು ಪ್ರಭಾಕರ್, ಆರೋಗ್ಯ ಸಚಿವ ಕೆ.ಸುಧಾಕರ್, ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಕರ್ನಾಟಕ ಆರೋಗ್ಯ ಘಟಕವನ್ನು ಟ್ವೀಟ್ನಲ್ಲಿ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.
More Stories
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ