ಕೋವಿಡ್ ನಿರ್ನಾಮಕ್ಕೆ ಫೈಜರ್ ಲಸಿಕಾಸ್ತ್ರ!

Team Newsnap
1 Min Read

ವಿಶ್ವವನ್ನೇ ನಡುಗಿಸಿದ ಕೋವಿಡ್-೧೯ ಗೆ ಮುಕ್ತಿ ಹಾಡಲು ಫೈಜರ್ ಲಸಿಕಾಸ್ತ್ರ ಸಿದ್ಧವಾಗಿ, ಮಾರುಕಟ್ಟೆಗೆ ಬಿಡುಗಡೆಗೆ ತುದಿಗಾಲಿನಲ್ಲಿ ನಿಂತಿದೆ.

ಕೊರೋನಾ ಸೋಂಕು ಕಟ್ಟಿ ಹಾಕಲು ಫೈಜರ್ ಲಸಿಕೆಯನ್ನು ಇಂಗ್ಲೆಂಡ್ ನಲ್ಲಿ ಡಿ. 7 ರಿಂದ ಮಾರು ಕಟ್ಟೆ ಬಿಡುಗಡೆಗೆ ಬ್ರಿಟನ್ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕೊರೋನಾ ಮುಕ್ತಿಗೆ ಮೊದಲ ಲಸಿಕೆ ಇದಾಗಲಿದೆ.

ಈ ಫೈಜರ್ ಲಸಿಕೆ ಭಾರತಕ್ಕೆ ತರಿಸುವ ಸಂಬಂಧ ಯಾವುದೇ ಒಪ್ಪಂದವಾಗಿಲ್ಲ. ಈ ಲಸಿಕೆಯ ಸಂಗ್ರಹವೇ ಒಂದು ದೊಡ್ಡ ಸವಾಲಾಗಲಿದೆ. ಮೈನಸ್ 70 ಡಿಗ್ರಿಯಲ್ಲಿ ಶೀಥಲೀಕರಣ ವ್ಯವಸ್ಥೆ ಯಲ್ಲಿ ಇಡಬೇಕಾಗುತ್ತದೆ. ಲಸಿಕೆ ಸಾಗಣೆ ಮತ್ತು ಸಂಗ್ರಹಣೆ ಪ್ರಮುಖ ಸಮಸ್ಯೆಯಾಗಲಿದೆ. ಅಲ್ಲದೇ 5 ದಿನದೊಳಗೆ ಈ ಲಸಿಕೆಯನ್ನು ಬಳಸಬೇಕಾಗುತ್ತದೆ. ನಂತರ ಇದು ನಿಷ್ಪ್ರಯೋಜಕವಾಗುತ್ತದೆ ಎನ್ನುತ್ತವೆ ಕಂಪನಿ ಮೂಲಗಳು.

Share This Article
Leave a comment