- ಕೊವ್ಯಾಕ್ಸಿನ್ ಲಸಿಕೆ ಪ್ರತಿ ಡೋಸ್ 295 ರು .
- ಕೋವಿಶೀಲ್ಡ್ ಲಸಿಕೆ ಪ್ರತಿ ಡೋಸ್ ಗೆ 210 ರು
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆ ಸರ್ಕಾರದೊಂದಿಗೆ ಬೆಲೆ ಒಪ್ಪಂದ ಮಾಡಿಕೊಂಡಿದೆ.
ಪ್ರತಿ ಡೋಸ್‍ಗೆ 295 ರು.ಗೆ ಮಾರಾಟ ಮಾಡಲಿದೆ ಎಂಬ ವರದಿಗಳು ಬಂದಿವೆ.
ಜನವರಿ 14ರಂದು ಮೊದಲು 12 ಕೇಂದ್ರಗಳಲ್ಲಿ, ಸುಮಾರು 55 ಲಕ್ಷ ಡೋಸ್‍ಗಳನ್ನು ಪೂರೈಸಲು ಕೇಂದ್ರ ಸರ್ಕಾರ ಭಾರತ್ ಬಯೋಟೆಕ್‍ಗೆ ಸೂಚಿಸಿದೆ.
ಮೊದಲ ಹಂತದಲ್ಲಿ ಕನಿಷ್ಠ 38.5 ಲಕ್ಷ ಮತ್ತು ಎರಡನೇ ಹಂತದಲ್ಲಿ 16.5 ಲಕ್ಷ ಲಸಿಕೆಯನ್ನು ಪೂರೈಸಲಾಗುತ್ತದೆ. 231 ಕೋಟಿ ಮೌಲ್ಯದ 1.1 ಕೋಟಿ ಡೋಸ್ ಲಿಸಿಕೆ ಪೂರೈಕೆಯಾಗಲಿದೆ. ಒಟ್ಟು 4.5 ಕೋಟಿ ಡೋಸ್ ಗಳಿಗಾಗಿ ಕೇಂದ್ರ ಸರ್ಕಾರ 1,176 ಕೋಟಿಗೆ ಸದ್ಯದ ದರಕ್ಕೆ ಒಪ್ಪಂದ ಮಾಡಿಕೊಂಡಿದೆ.
210 ರು ಪ್ರತಿ ಡೋಸ್ ಗೆ
ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಜೊತೆ ಸರ್ಕಾರ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ಗೆ 200 ರೂ. ಪ್ಲಸ್ ಜಿಎಸ್‍ಟಿ ಸೇರಿದಂತೆ ಒಪ್ಪಂದ ಮಾಡಿಕೊಂಡಿದೆ. ಏಪ್ರಿಲ್ 2021ರೊಳಗೆ 4.5 ಕೋಟಿ ಡೋಸ್ ಸೆರಂ ವಿತರಿಸಲಿದೆ. ಜಿಎಸ್‍ಟಿಯೂ ಸೇರಿದಂತೆ ಕೋವಿಶೀಲ್ಡ್ ಪ್ರತಿ ಡೋಸ್‍ಗೆ 210 ರೂ. ಆಗಲಿದೆ.
More Stories
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
ಯೋಗ ಗುರು ಶರತ್ ಜೋಯಿಸ್ ಹೃದಯಾಘಾತದಿಂದ ನಿಧನ