ವಂಚಕ ಯುವರಾಜ್ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ

Team Newsnap
1 Min Read

ಅಕ್ರಮ ಹಣ ವರ್ಗಾವಣೆ ಹಾಗೂ ಹಲವರಿಗೆ ವಂಚನೆ ಮಾಡಿದ್ದ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ವಂಚಕ ಯುವರಾಜ್ ಆಸ್ತಿ ಜಪ್ತಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.

ಆಸ್ತಿ ಜಪ್ತಿಗೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು. ಈ ಹಿನ್ನೆಲೆ ಇಂದು ಪ್ರಕರಣ ಕುರಿತು ವಿಚಾರಣೆ ನಡೆಸಿದ ಬೆಂಗಳೂರಿನ 67ನೇ ಸಿಸಿಹೆಚ್ ಕೋರ್ಟ್, ಯುವರಾಜ್ ನ 80 ರಿಂದ 90 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡುವಂತೆ ಮಧ್ಯಂತರ ಆದೇಶ ಹೊರಡಿಸಿದೆ.

ಪತ್ನಿಯ ಆಸ್ತಿಗೂ ಕೂಡ ಮುಟ್ಟುಗೋಲು

ಯುವರಾಜ್ ಹೆಂಡತಿಯ ಹೆಸರಿನಲ್ಲಿರುವ ಒಟ್ಟು 26 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ವಂಚಕ ಯುವರಾಜ್ ಗೆ ಸೇರಿದ ನಿವೇಶನ ಜಮೀನು ವಶಕ್ಕೆ ಪಡೆಯುವಂತೆ ಕೋರ್ಟ್ ಆದೇಶಿಸಿದೆ.

ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಹಾಸನ, ಮದ್ದೂರು, ದ್ವಾರ ಕೊತ್ತನಹಳ್ಳಿಯಲ್ಲಿ ನಿವೇಶನ, ಮನೆಗಳು, ಜಮೀನು ಸೇರಿ ಒಟ್ಟು 26 ಆಸ್ತಿ ಮುಟ್ಟುಗೋಲಿಗೆ ಆದೇಶ ಹೊರಡಿಸಲಾಗಿದೆ. ಯುವರಾಜ್​ ಜೊತೆ ಆತನ ಪತ್ನಿ ಆಸ್ತಿ ಕೂಡ ಜಪ್ತಿ ಆಗಲಿದೆ.

Share This Article
Leave a comment