ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ , ಹೊಟೇಲ್ ಊಟದ ಮೇಲೆ ಜನ ಹೆಚ್ಚು ಅವಲಂಬನೆ ಆಗುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ಆಹಾರ ಸೇವನೆ ಆಗದಿದ್ದರೆ ಅನಾರೋಗ್ಯ ಹೆಚ್ಚಾಗುತ್ತದೆ. ಹೆಚ್ಚು ಕೊಬ್ಬಿನಾಂಶ, ಉಪ್ಪು, ಸಕ್ಕರೆ, ಹೆಚ್ಚಿರೋ ಆಹಾರದಿಂದ ದುಷ್ಪರಿಣಾಮ ಇದೆ ಎಂದರು.
ಕಾಟನ್ ಕ್ಯಾಂಡಿ ಮತ್ತು ಗೋಬಿ (Gobi Manchuri) ಸ್ಯಾಂಪಲ್ ಕಲೆಕ್ಟ್ ಮಾಡಲಾಯಿತು. ಬೀದಿ ಬದಿ, ಹೊಟೇಲ್ ಗಳಲ್ಲಿ ಗೋಬಿಯ 171 ಮಾದರಿ ಸಂಗ್ರಹ ಮಾಡಲಾಯಿತು. ಇದರಲ್ಲಿ 107 ಕೃತಕ ಬಣ್ಣ ಬಳಕೆ ಆಗಿದೆ. ರೋಡಮೈನ್ ಬಿ, ಟಾರ್ ಟ್ರಾಸೈನ್ ಸ್ಯಾಂಪಲ್ ನಲ್ಲಿ ಸಿಕ್ಕಿದೆ. ರೋಡಮೈನ್ ಕ್ಯಾನ್ಸರ್ ಗೆ ಕಾರಣವಾಗಿದೆ.
107 ಸ್ಯಾಂಪಲ್ ನಲ್ಲಿ 12 ಟಾರ್ ಟ್ರಾಸೈನ್ ಸಿಕ್ಕಿದೆ ಮತ್ತು ಸನ್ ಸೆಟ್ 33 ಸಿಕ್ಕಿದೆ .ಇದ್ಯಾವುದನ್ನು ಆಹಾರದಲ್ಲಿ ಬಳಕೆ ಮಾಡುವಂತಿಲ್ಲ .25 ಮನುಷ್ಯರ ತಲೆಬುರುಡೆಗಳು ತೋಟದ ಮನೆಯಲ್ಲಿ ಪತ್ತೆ
ಕಾನೂನು ಪ್ರಕಾರ ಉಲ್ಲಂಘನೆ ಮಾಡಿದವರಿಗೆ 10 ಲಕ್ಷ ದಂಡ, 7 ವರ್ಷ ಶಿಕ್ಷೆ.
ಪ್ಲೇನ್ ಕಾಟನ್ ಕ್ಯಾಂಡಿ ತಯಾರಿ ಮಾಡಬಹುದು ಆದರೆ ಕಲರ್ ಕಾಟನ್ ಕ್ಯಾಂಡಿ ಮಾರಾಟ ಮಾಡುವಂತಿಲ್ಲ ಎಂದು ಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು