February 21, 2026

Newsnap Kannada

The World at your finger tips!

girl

ಮಲ್ಪೆ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದ್ದ ಕೊಡಗಿನ ಯುವತಿಯ ಶವ ಪತ್ತೆ

Spread the love

ಉಡುಪಿಯ ಮಲ್ಪೆ ಕಡಲು ತೀರದಲ್ಲಿ ಭಾನುವಾರ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದ ಯುವತಿಯ ಮೃತದೇಹ ಸೋಮವಾರ ಪತ್ತೆಯಾಗಿದೆ.

ಕೊಡುಗು ಮೂಲದ ಯುವತಿ ದೇಚ್ಚಮ್ಮ ಸಾವಿಗೀಡಾಗಿದ್ದಾಳೆ.

ಮೈಸೂರಿನ ಸ್ನೇಹಿತನೊಂದಿಗೆ ಕೊಡಗು ಮೂಲದ ಮೂವರು ಯುವತಿಯರು ಉಡುಪಿಗೆ ಪ್ರವಾಸಕ್ಕೆ ಆಗಮಿಸಿದ್ದರು.

ಭಾನುವಾರ ಸಂಜೆ ವೇಳೆ ಮಲ್ಪೆ ಸಮುದ್ರದಲ್ಲಿ ಲೈಫ್ ಗಾರ್ಡ್‌ಗಳ ಸೂಚನೆ ಲೆಕ್ಕಿಸದೇ ಅಲೆಗಳ ಜೊತೆಗೆ ಆಟವಾಡಲು ನಾಲ್ವರು ನೀರಿಗೆ ಇಳಿದ್ದರು ಎಂದು ಹೇಳಲಾಗಿದೆ.

ಅಲೆಗಳ ರಭಸಕ್ಕೆ ಈನಾಲ್ಕು ಮಂದಿ ಕೊಚ್ಚಿ ಹೋಗಿದ್ದರು. ಅದರಲ್ಲಿ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ ದೇಚಮ್ಮ ಮಾತ್ರ ನೀರಿನಲ್ಲಿ ನಾಪತ್ತೆಯಾಗಿದ್ದರು.

ಇಂದು ಯುವತಿಯ ಮೃತದೇಹ ಮಲ್ಪೆ ಬೀಚ್​ನ ಸೀವಾಕ್‌ ಬಳಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!