ಮುಂದಿನ ತಿಂಗಳು ಮದುವೆ ಸಿದ್ದತೆ ಮಾಡಿಕೊಂಡಿದ್ದ 28 ವರ್ಷದ ಯುವಕನೊಬ್ಬ ಕೊರೋನಾಗೆ ಬಲಿಯಾಗಿದ್ದಾನೆ.
ಎ. ಜಿ ಸಾಗರ್ ಎ.ಜಿ (28) ಕೊರೊನಾಗೆ ಬಲಿಯಾದ ಯುವಕ. ಬೆಂಗಳೂರಿನ ನಾಗರಭಾವಿ ನಿವಾಸಿಯಾದ ಈತನಿಗೆ ಸಕಾಲಕ್ಕೆ ಐಸಿಯು ಬೆಡ್ ಮತ್ತು ಆಕ್ಸಿಜನ್ ಸಿಗದೆ ನರಳಾಡಿ ಪ್ರಾಣಬಿಟ್ಟಿದ್ದಾನೆ.
ಟೆಸ್ಕೊ ಖಾಸಗಿ ಕಂಪನಿಯಲ್ಲಿ ಐಸಿ ರೋಲ್ ಆಗಿ ಸಾಗರ್ ಕಾರ್ಯನಿರ್ವಹಿಸುತ್ತಿದ್ದ.
ಕಳೆದ 2 ತಿಂಗಳ ಹಿಂದೆ ಸಾಗರ್ ಮದುವೆ ಬಗ್ಗೆ ಮಾತುಕತೆ ಕೂಡ ಆಗಿತ್ತು. ನಿಶ್ಚತಾರ್ಥ ಮಾಡದೆ ಕೇವಲ ಸರಳ ಮದುವೆಗೆ ಯೋಜನೆ ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಸಾಗರ್ಗೆ ಕೊರೊನಾಗೆ ಬಲಿಯಾಗಿದ್ದಾನೆ.
ಏಪ್ರಿಲ್ 12 ರಂದು ನಾಗರಬಾವಿಯ ಮೆಕ್ಲೂ ಲ್ಯಾಬ್ನಲ್ಲಿ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ಬಳಿಕ ಯುಗಾದಿ ಹಬ್ಬದ ನಂತರ ಚಳಿ, ಜ್ವರ ಕಾಣಿಸಿಕೊಂಡಿದೆ ಮತ್ತೆ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ನಡೆಸಿದ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ.
ಹಬ್ಬ ಕಳೆದ ಒಂದು ವಾರದ ಬಳಿಕ ಮಧ್ಯ ರಾತ್ರಿ ಸುಸ್ತು ಮತ್ತು ಬೇಧಿ ಪ್ರಾರಂಭವಾಯಿತು. ಗ್ಲೂಕೋಸ್ ಹಾಕಿಸಿಕೊಳ್ಳೋಕೆ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಸಿಟಿ ಸ್ಕ್ಯಾನಿಂಗ್ ಮಾಡಿಸಿದಾಗ ನ್ಯುಮೋನಿಯಾ ಇದೆ. ತುಂಬಾ ಸೀರಿಯಸ್ ಆಗಿದೆ ಎಂದು ವೈದ್ಯರು ಹೇಳಿದರ. ಅಲ್ಲೆಲ್ಲೂ ಐಸಿಯು ಬೆಡ್ ಸಿಕ್ಕಿಲ್ಲ. ಆದರೆ ವಿಧಿಯಾಟ ಸಾಗರ್ ಕೊರೊನಾಗೆ ಬಲಿಯಾಗಿದ್ದಾನೆ.
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ