February 21, 2026

Newsnap Kannada

The World at your finger tips!

anil vji

ಲಸಿಕೆ ಹಾಕಿಸಿಕೊಂಡಿದ್ದ ಸಚಿವರಿಗೂ ಮತ್ತೆ ಕೊರೋನಾ ಸೋಂಕು

Spread the love

ನವೆಂಬರ್ ೨೦ರಂದು ಪ್ರಯೋಗಾತ್ಮಕವಾಗಿ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ಮತ್ತೆ ಕೋವಿಡ್-೧೯ ಸೋಂಕು ಇರುವುದು ಖಚಿತವಾಗಿದೆ.

ಈ ಬಗ್ಗೆ ಸಚಿವರೇ ಟ್ವೀಟ್‌ಮಾಡಿ ಈ ವಿಷಯ ತಿಳಿಸಿ ಅಂಬಾಲದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸೇರಿರುವುದಾಗಿ ಹೇಳಿದ್ದಾರೆ.

ಅಂಬಾಲದಲ್ಲಿ ನಡೆದ ಮೂರನೇ ಹಂತದಲ್ಲಿ ಪ್ರಯೋಗಾರ್ಥ ಕೋವ್ಯಾಕ್ಸಿನ್ ಲಸಿಕೆಯನ್ನು ಸ್ವಯಂ ಸೇವಕರಾಗಿ ಸಚಿವರು ಪಡೆದುಕೊಂಡಿದ್ದರು.

ಈ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ತಯಾರಿಸುತ್ತಿದೆ. ಕಳೆದ ವಾರ ಪ್ರಧಾನಿ ನರೇಂದ್ರಮೋದಿ ಈ ಸಂಸ್ಥೆಗೂ ಭೇಟಿ ನೀಡಿ ಲಸಿಕೆ ಅಭಿವೃದ್ಧಿ ಕುರಿತು ಮಾಹಿತಿ ಪಡೆದಿದ್ದರು. ಭಾರತದಲ್ಲಿ ೯೬ ಲಕ್ಷ ಜನರು ಕೋವಿಡ್-೧೯ ತುತ್ತಾಗಿದ್ದು, ವಿಶ್ವದಲ್ಲಿ ಅಮೆರಿಕದ ನಂತರ ಹೆಚ್ಚಿನ ಸೋಂಕು ಕಾಣಿಸಿಕೊಂಡ ದೇಶ ಇದಾಗಿದೆ.

error: Content is protected !!