ಚಿಕ್ಕಮಗಳೂರು ಶಾಲೆಯ 26 ವಿದ್ಯಾರ್ಥಿನಿಯರಿಗೆ ಕೊರೊನಾ‌ ಸೋಂಕು : ವಿದ್ಯಾರ್ಥಿ, ಶಿಕ್ಷಕರಲ್ಲಿ ಆತಂಕ

Team Newsnap
1 Min Read

ಒಂದೇ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಘಟನೆ ಚಿಕ್ಕಮಗಳೂರಿನ ಬಸವನಹಳ್ಳಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.

ಮೊದಲು ಓರ್ವ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈಗ ಶಾಲೆಯ 26 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ 400ಕ್ಕೂ ಅಧಿಕ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು.
ಇದೀಗ ಕೆಲವರ ವರದಿ ಬಂದಿದ್ದು, ಅದೇ ಶಾಲೆಯ 26 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆ ವಿದ್ಯಾರ್ಥಿನಿಯಿಂದಲೇ ಸೋಂಕು ತಗುಲಿದೆ ಎಂಬ ಅನುಮಾನ ಮೂಡಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರೋಬ್ಬರಿ 98 ಪ್ರಕರಣಗಳು ಪತ್ತೆಯಾಗಿದೆ. ಈಗಾಗಲೇ ಮಹಾಮಾರಿ ದಂಪತಿಯನ್ನು ಬಲಿಪಡೆದಿದೆ.

ಶೃಂಗೇರಿಯ ವಸತಿ ಶಾಲೆಯಲ್ಲೂ ಮೂವರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಇದೀಗ ಇನ್ನಷ್ಟು ವಿದ್ಯಾರ್ಥಿಗಳ ತಪಾಸಣಾ ವರದಿ ಬರಲಿದೆ, ಆತಂಕ ಮಾತ್ರ ಜನರನ್ನು ‌ಕಾಡುತ್ತಿದೆ.

Share This Article
Leave a comment