ಕೊರೊನಾ ಎರಡನೇ ಅಲೆ ಸ್ಫೋಟ ಹಿನ್ನೆಲೆ ರಾಜ್ಯದಲ್ಲಿ ಏಪ್ರಿಲ್ 20ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ಆದರೆ ಕೊರೋನಾ ಭೀತಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಶಾಲೆಗಳ ರಜೆಯನ್ನು ಮತ್ತಷ್ಟು ದಿನ ಮುಂದುವರೆಸಿರಿ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆಂದು ಗೊತ್ತಾಗಿದೆ.
ರಾಜ್ಯದಲ್ಲಿ ಸರಾಸರಿ 5 ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣಗಳ ವರದಿ ಆಗುತ್ತಿರುವ ಹಿನ್ನೆಲೆ ಶಾಲೆಗಳನ್ನು ಪ್ರಾರಂಭ ಮಾಡೋದು ಬೇಡ ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ ಎಂದು ಗೊತ್ತಾಗಿದೆ. ಅಲ್ಲದೇ ಈ ಹಿಂದೆಯೂ ತಜ್ಞರ ಸಲಹೆ ಮೇರೆಗೆ ಸರ್ಕಾರ ಎರಡು ವಾರ ಶಾಲೆಗಳಿಗೆ ರಜೆ ನೀಡಿತ್ತು.
ತಜ್ಙರು ಈಗ ನೀಡಿರುವ ಸಲಹೆಗಳು ಏನು?
- ಏಪ್ರಿಲ್ 20ರವರೆಗೆ ನೀಡಿರುವ ರಜೆಯನ್ನು ಏಪ್ರಿಲ್ ಅಂತ್ಯದವರೆಗೆ ವಿಸ್ತರಣೆ ಮಾಡಿ.
- ಕೊರೊನಾ ಸೋಂಕು ಕಂಟ್ರೋಲ್ ಗೆ ಬರೋವರೆಗೂ ಶಾಲೆ ಪ್ರಾರಂಭ ಬೇಡ.
- ಪರಿಸ್ಥಿತಿ ನೋಡಿಕೊಂಡು ರಜೆ ಅವಧಿ ವಿಸ್ತರಣೆ ಮಾಡು ಬಗ್ಗೆ ನಿರ್ಧಾರ ಮಾಡಿ.
- ಬೆಂಗಳೂರಿನಲ್ಲಿ ದಿನೇ ದಿನೇ ಕೇಸ್ ಹೆಚ್ಚಳ ಆಗ್ತಿದೆ. ಹೀಗಾಗಿ ಈ ಸಮಯಲ್ಲಿ ಶಾಲೆ ಪ್ರಾರಂಭ ಬೇಡ.
- ಶಾಲೆ ಪ್ರಾರಂಭ ಆದ್ರೆ ಮತ್ತೆ ಸೋಂಕು ಹೆಚ್ಚಳ ಆಗಬಹುದು. 10 ಮತ್ತು 12 ನೇ ತರಗತಿಗಳಿಗೆ ಈಗ ನಡೆಯುತ್ತಿರುವಂತೆಯೇ ಶಾಲೆ ನಡೆಸಿ.
- 10-12 ನೇ ತರಗತಿಗಳ ಪರೀಕ್ಷೆಗಳನ್ನು ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಿ.
- 1-9 ನೇ ತರಗತಿಗಳಿಗೆ ಸದ್ಯಕ್ಕೆ ಕೊರೊನಾ ಕಂಟ್ರೋಲ್ ಗೆ ಬರೋವರೆಗೂ ಪರೀಕ್ಷೆ ನಡೆಸುವುದು ಬೇಡ.
- ಪರೀಕ್ಷೆ ಮಾಡಲೇಬೇಕಾದ್ರೆ ಆನ್‍ಲೈನ್ ನಲ್ಲಿ ನಡೆಸೋದು ಸೂಕ್ತ.
- ಪಠ್ಯ ಬೋಧನೆಗೆ ಆನ್ ಲೈನ್, ಯೂಟ್ಯೂಬ್, ದೂರದರ್ಶನ ಸೇರಿದಂತೆ ಇನ್ನಿತರ ಮಾರ್ಗಗಳನ್ನು ಸದ್ಯಕ್ಕೆ ಮುಂದುವರಿಸಿ.
- ಖಾಸಗಿ ವಾಹನಗಳಿಗೆ ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಪರಿಚಯಿಸಲು ಸರ್ಕಾರ ತೀರ್ಮಾನ
- ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
- ವಿಚಿತ್ರ ಕಾಯಿಲೆಗೆ 15 ಜನರು ಬಲಿಪಡೆದ ಅನುಮಾನಾಸ್ಪದ ಘಟನೆ
- ಆಕಸ್ಮಿಕ ಗುಂಡು ಸಿಡಿದು ವ್ಯಕ್ತಿ ಸಾವು
- ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
More Stories
ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು