ಕೊರೋನಾ ದೇಶೀ ಔಷಧ
2-ಡಿಆಕ್ಸಿ-ಡಿ-ಗ್ಲುಕೋಸ್(2-ಡಿಜಿ) ಹೆಸರಿನ ಪೌಡರ್ ಅನ್ನು ಇಂದು
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಕುರಿತಂತೆ ಒಂದಷ್ಟು ಮಾಹಿತಿ ಇಲ್ಲಿದೆ.
ಔಷಧಿಯ ವಿವರ :
- ಹೈದರಾಬಾದಿನ ಡಾ.ರೆಡ್ಡೀಸ್ ಲ್ಯಾಬ್ ಸಹಯೋಗದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿ ಪಡಿಸಿರುವ ಕೋವಿಡ್ ಔಷಧ 2-ಡಿಆಕ್ಸಿ-ಡಿ-ಗ್ಲುಕೋಸ್(2-ಡಿಜಿ) ಹೆಸರಿನ ಪೌಡರ್ ಅನ್ನು ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಜಿಸಿಐ) ವಾರದ ಹಿಂದೆ ಅನುಮೋದನೆ ನೀಡಿತ್ತು.
ಬಳಕೆ ಹೇಗೆ?
- ಈ ಪೌಡರ್ ಅನ್ನು ನೀರಿನಲ್ಲಿ ಕಲಕಿ ಸೇವಿಸಬಹುದು. ಕ್ಲಿನಿಕಲ್ ಪ್ರಯೋಗದ ವೇಳೆ ಈ ಪೌಡರ್ ಸೇವಿಸಿದ ಸೋಂಕಿತರು ಆಸ್ಪತ್ರೆಯಿಂದ ಬಹಳ ಬೇಗ ಚೇತರಿಕೆ ಕಾಣುತ್ತಿದ್ದಾರೆ.
ಪ್ರತಿದಿನ 2 ಪ್ಯಾಕ್ 2ಜಿಡಿ ಔಷಧ ಪಡೆದ ಶೇ.42ರಷ್ಟು ರೋಗಿಗಳು ಕೇವಲ 3 ದಿನದಲ್ಲಿ ಆಕ್ಸಿಜನ್ ಸಪೋರ್ಟ್ ನಿಂದ ಹೊರ ಬಂದಿದ್ದಾರೆ.
ಎಷ್ಟು ಪರಿಣಾಮಕಾರಿ?
- ಈ ಔಷಧ ಕೊರೊನಾ ವೈರಸ್ ಅನ್ನು ಕೊಲ್ಲುವುದಿಲ್ಲ. ವೈರಸ್ ಜೀವಕೋಶದ ಒಳಗಡೆ ಸಂಗ್ರಹವಾಗಿ ವೈರಸ್ ದ್ವಿಗುಣಗೊಳ್ಳುವುದನ್ನು ತಡೆದು ಆದರ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.
ಅಲ್ಲದೇ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ.
ಬೆಲೆ ಎಷ್ಟು ಗೊತ್ತಾ?
ಈ ಪೌಡರ್ ಬೆಲೆ ಕಡಿಮೆ ಇರಲಿದೆ ಎಂದು ವರದಿಯಾಗಿದೆ. ಒಂದು ಪ್ಯಾಕ್ ಬೆಲೆ 500 – 600 ರೂ. ದರ ಇರಬಹುದು ಎಂದು ಅಂದಾಜಿಸಲಾಗಿದೆ.
- ಈ ಔಷಧಿ ಸದ್ಯಕ್ಕೆ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗಲಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ