ಕೊರೊನಾ ಹೆಮ್ಮಾರಿಯ ಹಿಮ್ಮೆಟ್ಟಿಸಲು ಸಂಜೀವಿನಿ ರೂಪದಲ್ಲಿ ಬಂದಿರುವ
ಡಿಆರ್ಡಿಓ ಸಂಶೋಧನೆಯ 2-ಡಿಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ).
ಗ್ಲೂಕೋಸ್‌ನ ಜೆನೆರಿಕ್ ಅಣು ಆಗಿರುವುದರಿಂದ ಇದನ್ನು ಸುಲಭವಾಗಿ ಉತ್ಪಾದಿಸಬಹುದು ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಿಸಬಹುದು ಎಂದು ಡಿಆರ್‌ಡಿಒ ತಿಳಿಸಿತ್ತು.
ಡಿಆರ್‌ಡಿಒ ಪ್ರಕಟಣೆಯ ಪ್ರಕಾರ, 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ರೋಗ ಲಕ್ಷಣದ ಆಧಾರದ ಮೇಲೆ ನೀಡುವ ಚಿಕಿತ್ಸೆಯಲ್ಲಿ ಕಡಿಮೆ ಎಂದರೂ 2.5 ದಿನ, ಬೇಗ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಈ ಔಷಧಿಯನ್ನು ಫೇಸ್-2 ನಲ್ಲಿ 110 ರೋಗಿಗಳಿಗೆ ಹಾಗೂ ಫೇಸ್-3 ನಲ್ಲಿ 3 ರೋಗಿಗಳಿಗೆ ನೀಡಲಾಗಿದ್ದು ಪ್ರಯೋಗ ಸಂಪೂರ್ಣ ಯಶಸ್ಸನ್ನು ಕಂಡಿದೆ ಅಂತಾ ಡಿಆರ್ಡಿಓ ವಿಜ್ಞಾನಿ ಡಾ.ಸುಧೀರ್ ಚಂದ್ನಾ ತಿಳಿಸಿದ್ದಾರೆ.
ಡಾ. ಸುಧೀರ್ ತಿಳಿಸುವಂತೆ ಪ್ರಯೋಗದ ವೇಳೆ ಈ ಔಷಧಿ ಪಡೆದ ಸೋಂಕಿತರು, 2ರಿಂದ 3ದಿನಗಳಷ್ಟು ಬೇಗ ವಾಸಿಯಾಗಿದ್ದಾರೆ. ಫೇಸ್ 3 ಪ್ರಯೋಗದಲ್ಲಿ ಸೋಂಕಿತರು ಆಕ್ಸಿಜನ್ ಉಪಯೋಗಿಸಿರೋದು ಕುಡ ಕಡಿಮೆಯಾಗಿದೆ ಅನ್ನೋದನ್ನ ಅವ್ರು ಹೇಳಿದ್ದಾರೆ.
ವಿಶೇಷ ಅಂದ್ರೆ ಹೈದರಾಬಾದ್ನ ಡಾ. ರೆಡ್ಡೀಸ್ ಲ್ಯಾಬ್ ಡಿಆರ್ಡಿಓ ಜೊತೆ ಈ ಔಷಧ ಉತ್ಪಾದನೆಯ ಪಾಲುದಾರ ಸಂಸ್ಥೆಯಾಗಿದೆ. ಈ ಸಂಸ್ಥೆ ಅತ್ಯಂತ ಶೀಘ್ರದಲ್ಲಿ 2-ಡಿಆಕ್ಸಿ-ಡಿ-ಗ್ಲೂಕೋಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.
More Stories
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ
ಮೈಸೂರಿನ ಸರ್ಕಾರಿ ಶಾಲೆಯ ಜಾಗ ವಕ್ಫ್ ಆಸ್ತಿಯಾಯ್ತು – ಸಿಎಂಗೆ ಪ್ರತಾಪ್ ಸಿಂಹ ಟಾಂಗ್