January 16, 2025

Newsnap Kannada

The World at your finger tips!

bus

ಐದನೇ ದಿನವೂ ಸಾರಿಗೆ ನೌಕರರ ಮುಷ್ಕರ ಮುಂದುವರಿಕೆ

Spread the love

ರಾಜ್ಯದಾದ್ಯಂತ ಸಾರಿಗೆ ನೌಕರರು ನಡೆಸಿರುವ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ.

ಯುಗಾದಿ ಹಬ್ಬದ ಜೊತೆ ಸಾಲು ಸಾಲು ರಜೆ ಹಿನ್ನೆಲೆ ಜನರು ಊರುಗಳತ್ತ ಪ್ರಯಾಣಿಸಲು ಮುಂದಾಗಿದ್ದಾರೆ. ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಬಸ್ ಸಿಗದ ಹಿನ್ನೆಲೆ ಪ್ರಯಾಣಿಕರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.

ಈ ನಡುವೆ ಮುಷ್ಕರದಲ್ಲಿ ಭಾಗಿಯಾಗಿರುವ ಬಿಎಂಟಿಸಿಯ 60 ಟ್ರೈನಿ ನೌಕರರು, 58 ಪ್ರೋಬೇಷನರಿ ಸಿಬ್ಬಂದಿ, ಸೇರಿ ಒಟ್ಟು 118 ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಕೆಎಸ್‍ಆರ್ ಟಿಸಿ 141 ಜನ ಉದ್ದೋಗಿಗಳನ್ನು ವರ್ಗಾವಣೆ ಮಾಡಿದೆ. ಮುಷ್ಕರಕ್ಕೆ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದ ಹಾವೇರಿ ಡಿಪೋದ 17 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಕೆಲವೆಡೆ ಬಸ್ ಸಂಚಾರ ಆರಂಭ :

ಬಂದ್‍ನ 4ನೇ ದಿನ 1,220 ಬಸ್‍ಗಳು ಸಂಚಾರ ನಡೆಸಿವೆ. ಕೆಎಸ್‍ಆರ್ ಟಿಸಿ 597, ಬಿಎಂಟಿಸಿಯ 171, ಈಶಾನ್ಯ ಸಾರಿಗೆಯ 290, ವಾಯುವ್ಯ ಸಾರಿಗೆಯ 162 ಬಸ್ ಸಂಚಾರ ಮಾಡಿವೆ. ಸರ್ಕಾರಿ ಬಸ್‍ಗಳು ಬಂದ್ ಆಗಿರುವ ಹಿನ್ನೆಲೆ ಪರ್ಯಾಯವಾಗಿ ಖಾಸಗಿ ಬಸ್‍ಗಳನ್ನೇನೋ ರಸ್ತೆಗೆ ಇಳಿಸಲಾಗಿದೆ.

ಜನ ಇನ್ನು ಸಹ ಪ್ರೈವೇಟ್ ಬಸ್‍ಗಳ ಕಡೆ ಮುಖ ಮಾಡುತ್ತಿಲ್ಲ. ಹಲವು ಕಡೆ ಖಾಸಗಿ ಬಸ್‍ಗಳು ಹೆಚ್ಚು ದರ ವಿಧಿಸುತ್ತಿರೋದೆ ಇದಕ್ಕೆ ಕಾರಣವಾಗಿದೆ.

Copyright © All rights reserved Newsnap | Newsever by AF themes.
error: Content is protected !!