February 19, 2026

Newsnap Kannada

The World at your finger tips!

WhatsApp Image 2023 03 10 at 1.52.40 PM

ವರಿಷ್ಠರು ಸೂಚಿಸಿದರೆ ಮಂಡ್ಯ ಕೇತ್ರದಿಂದ ಸ್ಪರ್ಧೆ: ಸಂಸದೆ ಸುಮಲತಾ

Spread the love

ಮದ್ದೂರು:ಬಿಜೆಪಿ ವರಿಷ್ಠರು ಸೂಚನೆ ನೀಡಿದರೆ ಮಂಡ್ಯ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಹೇಳಿಕೆ ಅಚ್ಚರಿಯಿಂದ ಕೂಡಿದೆ

ಮದ್ದೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ಮಾತನಾಡಿ, ಮಂಡ್ಯ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವದಂತಿ ಇದೆ.

ವಿಧಾನ ಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ಪಕ್ಷ ಸೂಚನೆ ನೀಡಿದರೆ ನನ್ನ ಸ್ಪರ್ಧೆ ಇರಲಿದೆ. ಮಂಡ್ಯ ಜಿಲ್ಲೆಯ ಜನರ ಬದಲಾವಣೆ ಬಯಸುತ್ತಾರೆ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಅಚ್ಚರಿಯ ಚುನಾವಣಾ ಫಲಿತಾಂಶ ಬರುವ ಸಾಧ್ಯತೆಯಿದೆ.

ಮದ್ದೂರಿನಲ್ಲಿ ಅಂಬರೀಶ್‌ ಅಭಿಮಾನಿಗಳು ಹೆಚ್ಚಾಗಿದ್ದಾರೆ ಆ ಕಾರಣದಿಂದಾಗಿ ಬಿಜೆಪಿಗೆ ಅನುಕೂಲ ವಾಗಲಿದೆ. ಆ ಕಾರಣದಿಂದಾಗಿ ನನ್ನ ಮಗ ಅಭಿಷೇಕ್‌ ಅಂಬರೀಶ್‌ ಬಿಜೆಪಿ ಪರ ಪ್ರಚಾರ ಮಾಡುವ ಸಾಧ್ಯತೆಯಿದೆ.ಇದನ್ನು ಓದಿ –ಶ್ರೀರಂಗಪಟ್ಟಣದಲ್ಲಿ ಪತ್ರಕರ್ತರ ಮೇಲೆ ಪೊಲೀಸರ ದರ್ಪ : ಮೈಸೂರು – ಬೆಳ್ತಂಗಡಿಯಲ್ಲಿ ಕಾರ್ಯಕರ್ತರ ಗಲಾಟೆ

error: Content is protected !!