ವಸತಿ ರಹಿತ ಮೀನುಗಾರರಿಗೆ ವಿಶೇಷ ಸೌಲಭ್ಯ, ದೋಣಿಗಳಿಗೆ ಮೋಟಾರ್ ಇಂಜಿನ್ ಅಳವಡಿಕೆ. ಮಹಿಳಾ ಕಾರ್ಮಿಕರಿಗೆ 500 ರೂ. ಸಹಾಯಧನ ನೀಡಲಾಗುವುದು, ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆ, ನೆಲೆ ಯೋಜನೆಯಡಿ 10 ಸಾವಿರ ಸೈಟ್ ವಿತರಣೆ ಮಾಡಲಾಗುವುದು.
ಪ್ರತಿ ಗ್ರಾ.ಪಂಗೆ 10 ಲಕ್ಷ ರೂ. ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ನೇಕಾರ ಸಮ್ಮಾನ್ ಯೋಜನೆಯಡಿ ಸಹಾಯಧನ ಮೊತ್ತವನ್ನು 3 ಸಾವಿರ ರೂ.ನಿಂದ 5 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ
ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಜಾರಿ ಮಾಡಲಾಗಿದ್ದು, ಈ ಯೋಜನೆ ಮೂಲಕಸರ್ಕಾರಿ ಪದವಿ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ, ಉಚಿತ ಉನ್ನತ ಶಿಕ್ಷಣ ಯೋಜನೆ ಜಾರಿ, 9556 ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುವುದು.
ಕಿರುಧಾನ್ಯ ಬೆಳಗಾರರಿಗೆ 10 ಸಾವಿರ ಸಹಾಯಧನ, ರಾಮನಗರದಲ್ಲಿ ಬೃಹತ್ ರಾಮಮಂದಿರ ನಿರ್ಮಾಣ, 50 ಲಕ್ಷ ಜನರಿಗೆ ಕಾವೇರಿ ನೀರು ಪೂರೈಸಲು ಕ್ರಮ , 110 ಗ್ರಾಮಗಳಿಗೆ ಕುಡಿಯುವ ನೀರಿಗೆ ಕ್ರಮ.
More Stories
ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳ ನಿರ್ಧಾರ – ಶೀಘ್ರದಲ್ಲೇ ಅಧಿಕೃತ ಘೋಷಣೆ!
ನಾಳೆಯಿಂದ ಆರಂಭವಾಗುವ ದ್ವಿತೀಯ PUC ಪರೀಕ್ಷೆ – ಸಂಪೂರ್ಣ ಮಾಹಿತಿ ಇಲ್ಲಿದೆ!
SSLC ಮತ್ತು PUC ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ಉಚಿತ KSRTC ಬಸ್ ಪ್ರಯಾಣ