December 29, 2024

Newsnap Kannada

The World at your finger tips!

vidhana soudha

ರಾಜ್ಯ 5ನೇ ಹಣಕಾಸು ಆಯೋಗ ರಚನೆ

Spread the love

ಬೆಂಗಳೂರು: ಮಾಜಿ ಸಂಸದ ಸಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಜ್ಯ ಸರ್ಕಾರ 5ನೇ ರಾಜ್ಯ ಹಣಕಾಸು ಆಯೋಗವನ್ನು ರಚಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಮೊಹಮ್ಮದ್ ಸನಾವುಲ್ಲಾ ಹಾಗೂ ರಾಜ್ಯ ಲೆಕ್ಕಪತ್ರ ಇಲಾಖೆ ನಿವೃತ್ತ ನಿಯಂತ್ರಕರಾದ ಆರ್.ಎಸ್ ಫೆÇಂಡೆ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಾರೆ.

ಫೆಬ್ರವರಿ 2024ರೊಳಗೆ ವರದಿ ಸಲ್ಲಿಸಲು ಆಯೋಗಕ್ಕೆ ಸರ್ಕಾರ ಸೂಚಿಸಿದೆ. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಆರ್ಥಿಕ ಸ್ಥಿತಿಗಳನ್ನು ಪರಿಶೀಲಿಸಿದ ನಂತರ ಸಂಪನ್ಮೂಲಗಳ ಹಂಚಿಕೆ ಹಾಗೂ ವಿಭಜನೆ ಕುರಿತ ಶಿಫಾರಸುಗಳನ್ನು ನೀಡಲು ಈ ಆಯೋಗವನ್ನು ರಚಿಸಲಾಗಿದೆ. ಆಯೋಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಮುನ್ಸಿಪಲ್ ಕಾಪೆರ್Çರೇಶನ್‍ಗಳು, ಸಿಟಿ ಮುನ್ಸಿಪಲ್ ಕೌನ್ಸಿಲ್‍ಗಳು, ಟೌನ್ ಮುನ್ಸಿಪಲ್ ಕೌನ್ಸಿಲ್‍ಗಳು ಮತ್ತು ಟೌನ್ ಪಂಚಾಯತಿಗಳ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಆಯೋಗ, ಸರ್ಕಾರದಿಂದ ವಿಧಿಸುವ ತೆರಿಗೆಗಳು, ಸುಂಕಗಳು, ಸುಂಕಗಳು ಮತ್ತು ಶುಲ್ಕಗಳ ಆದಾಯಗಳನ್ನು ಸರ್ಕಾರ ಹಾಗೂ ವಿವಿಧ ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್ ನಡುವೆ ಹಂಚಿಕೆ ಮಾಡಲು ನಿಯಮಗಳನ್ನು ರೂಪಿಸಿ ಶಿಫಾರಸು ಮಾಡಲಿದೆ.45 ನಾಯಕರು ಕಾಂಗ್ರೆಸ್ ಸೇರ್ಪಡೆ

ಸಮಿತಿಯು ಈ ಸಂಸ್ಥೆಗಳಿಗೆ ರಾಜ್ಯದ ಕ್ರೋಢೀಕೃತ ನಿಧಿಯಿಂದ ನೀಡಲಾದ ಸಹಾಯಧನ ಮತ್ತು ಅವುಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬೇಕಾದ ಕ್ರಮಗಳನ್ನು ಪರಿಶೀಲಿಸುತ್ತದೆ. ಸಂಪನ್ಮೂಲಗಳು ಯಾವ ಪ್ರಮಾಣದಲ್ಲಿ ಮತ್ತು ಯಾವ ರೀತಿಯಲ್ಲಿ ಲಭ್ಯವಿವೆ ಎಂಬುದರ ಕುರಿತು ಪರಿಶೀಲಿಸಲಿದೆ. ಲಭ್ಯವಿರುವ ಸಂಪನ್ಮೂಲಗಳನ್ನು ಈ ಸಂಸ್ಥೆಗಳ ವೆಚ್ಚವನ್ನು ಪೂರೈಸಲು ಯಾವ ರೀತಿಯಲ್ಲಿ ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಸಲಹೆಗಳನ್ನು ನೀಡುತ್ತದೆ.

Copyright © All rights reserved Newsnap | Newsever by AF themes.
error: Content is protected !!