ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರ ಗುಂಪಿನಿಂದ ಭಾರತದ ಸೇನೆ ಅಪಾರ ಶಸ್ತ್ರಾಸ್ತ್ರ, ಮದ್ದುಗುಂಡು ವಶಪಡಿಸಿಕೊಂಡಿದೆ.
ಜಮ್ಮು ಕಾಶ್ಮೀರದ ಪಿಓಕೆ(ಪಾಕ್ ಆಕ್ರಮಿತ ಕಾಶ್ಮೀರ್)ಯ ಹತ್ತಿರದಲ್ಲಿರುವ ಕಿಶನ್ ಗಂಗಾ ನದಿಯ ದಂಡೆಯಲ್ಲಿ ಭಾರತೀಯ ಸೇನೆ ಜಮ್ಮು ಕಾಶ್ಮೀರ ಪೋಲೀಸರ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಸಿದೆ.
ಸಿನಿಮೀಯ ಮಾದರಿಯಲ್ಲಿ, ಪಾಕ್ ಆಕ್ರಮಿತ ಕಾಶ್ಮೀರದಿಂದ ಉಗ್ರರು ಮದ್ದುಗುಂಡುಗಳನ್ನು, ಶಸ್ತ್ರಾಸ್ತ್ರಗಳನ್ನು ಕಿಶನ್ ಗಂಗಾ ನದಿಯಲ್ಲಿ ಟ್ಯೂಬ್ ಮೂಲಕ ಕಳುಹಿಸುತ್ತಿದ್ದುದನ್ನು ಉತ್ತರ ಕಾಶ್ಮೀರದ ಕೇರನ್ ಸೆಕ್ಟರ್‌ನ ಯೋಧರು ಪತ್ತೆ ಮಾಡಿದ್ದರು.
ಕೂಡಲೇ ಎಚ್ಚೆತ್ತ ಭಾರತೀಯ ಸೇನೆ, ಜಮ್ಮು ಕಾಶ್ಮೀರದ ಪೋಲೀಸರ ಜಂಟಿ ಕಾರ್ಯಾಚರಣೆಯೊಂದಿಗೆ ನದಿ ದಂಡೆಯ ಬಳಿ ದಾಳಿ ಮಾಡಿ, 4 ಎಕೆ 47 ರೈಫಲ್‌ಗಳು, 8 ಮ್ಯಾಗಜಿನ್‌ಗಳು, 240 ಎಕೆ ರೈಫಲ್ ಮದ್ದುಗುಂಡುಗಳನ್ನು ಸೇನೆ ವಶ ಮಾಡಿಕೊಂಡಿದೆ. ಹಾಗೆಯೇ ಕಿಶನ್ ಗಂಗಾ ನದಿಯ ಬಳಿ ಉಗ್ರರ ಚಲನ-ವಲನ ಬಗ್ಗೆ ವಿಡಿಯೋವೊಂದನ್ನೂ ಸಹ ಬಿಡಲಾಗಿದೆ.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ