January 28, 2026

Newsnap Kannada

The World at your finger tips!

terr

ಭಾರತದಲ್ಲಿ ಉಗ್ರರ ದಾಳಿಯ ಸಂಚು; ಎನ್ಐಎಯ ಮಿಂಚಿನ ಕಾರ್ಯಾಚರಣೆ

Spread the love

ಭಾರತದ ಪಶ್ಚಿಮ ಬಂಗಾಳ, ಬೆಂಗಳೂರು, ಕೇರಳ, ದೆಹಲಿ‌ ಸೇರಿದಂತೆ ಅನೇಕ‌ ನಗರಗಳ ಮೇಲೆ ದಾಳಿ ಸಂಚು ನಡೆಸುತ್ತಿದ್ದ ಅಲ್ ಖೈದಾದ ಉಗ್ರರ ಸಂಚನ್ನು ಎನ್ಐಎ (ರಾಷ್ಟ್ರಿಯ ತನಿಖಾ ದಳ) ಮಿಂಚಿನ ಕಾರ್ಯಾಚರಣೆ ಮೂಲಕ ವಿಫಲಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೯ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಪಾಕಿಸ್ತಾನದಿಂದ ಸೂಚನೆಗಳು ಬರುತ್ತಿದ್ದವು. ಅಲ್ಲದೇ ಉಗ್ರರಿಗೆ ಪಾಕಿಸ್ತಾನದಿಂದ ಹಣ ಹಾಗೂ ಬಾಂಬ್ ತಯಾರಿಸಲು‌ ಬೇಕಾದ ಸಾಮಗ್ರಿ ಎಲ್ಲವನ್ನೂ ಕಳಿಸಲಾಗಿತ್ತು.
ಮುರ್ಷಿದ್‌ ಹಸನ್‌, ಇಯಾಕುಬ್‌ ಬಿಸ್ವಾಸ್‌, ಮೊಸರಫ್‌ ಹೊಸೇನ್‌ ಎಂಬುವರನ್ನು ಕೇರಳದಿಂದ ಹಾಗೂ ನಜ್ಮಸ್‌ ಸಾಕಿಬ್‌, ಅಬು ಸೂಫಿಯಾನ್‌, ಮೈನುಲ್‌ ಮೊಂಡಲ್‌, ಲಿಯು ಹೀನ್‌ ಅಹಮದ್‌, ಅಲ್‌ ಮಾಮುನ್‌ ಕಮಲ್‌ ಮತ್ತು ಅತಿತುರ್‌ ರೆಹಮಾನ್‌ ಎಂಬುವವರು ಬಂಧಿತ ಆರೋಪಿಗಳು. ಕೇರಳದಲ್ಲಿ‌ ಸಿಕ್ಕಿರುವ ಅಪರಾಧಿಗಳೂ ಸಹ‌ ಪಶ್ಚಿಮ ಬಂಗಾಳಕ್ಕೆ ಸೇರಿದವರಾಗಿದ್ದಾರೆ. ಆರೋಪಿಗಳಿಂದ ಬಾಂಬ್ ತಯಾರಿಸಲು ಬೇಕಾದ ದಾಖಲೆಗಳು, ನಾಡಪಿಸ್ತೂಲು ಮುಂತಾದವುಗಳನ್ನು ತನಿಖಾದಳ ವಶಪಡಿಸಿಕೊಂಡಿದೆ.

ದಾಳಿಯ ಸಂಚಿನ ಮಾಹಿತಿ ಸಿಕ್ಕಿದ್ದ ಎನ್ಐಎಯು ಕೇರಳ ಹಾಗೂ ಪಶ್ಚಿಮ ಬಂಗಾಳದ ಪೋಲೀಸರ ಸಮನ್ವಯ ಸಾಧಿಸಿ ಈ ಚುರುಕಿನ ಕಾರ್ಯಾಚರಣೆಯನ್ನು ಕೈಗೊಂಡಿದೆ. ಇದರಿಂದ ದೇಶದಲ್ಲಿ‌ ನಡೆಯಬಹುದಾಗಿದ್ದ ದಾಳಿಗಳನ್ನು ಎನ್ಐಎ ತಡೆದಿದೆ. ಬಂಧಿತರನ್ನು ಬಂಗಾಳದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆಪ್ಟೆಂಬರ್ ‌೨೪ರವರೆಗೆ ಎನ್ಐಎ ಬಂಧನಕ್ಕೆ ಒಪ್ಪಿಸಿದೆ. ಸಧ್ಯ ಎನ್ಐಎ ಅಧಿಕಾರಿಗಳು ಬಿರುಸಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!