January 5, 2025

Newsnap Kannada

The World at your finger tips!

soniya

ಕಾಶ್ಮೀರ TO ಕನ್ಯಾಕುಮಾರಿ ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ಸಂಕಲ್ಪ

Spread the love

ದೇಶದ ವಿವಿದೆಡೆ ಸೋಲುಗಳಿಂದ ಸುಸ್ತಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ವೈಭವ ತರಲು ಉದಯಪುರದಲ್ಲಿ ಮೂರು ದಿನಗಳ ಕಾಲ ನಡೆದ ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಸಂಕಲ್ಪ – ಸೋನಿಯಾ ವಿಶ್ವಾಸ ಏನು ?

1) ಮೋದಿ ಸರ್ಕಾರದ ಹುಳುಕು ಬಯಲು ಮಾಡುವ ಜೊತೆಗೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲು ‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತ್ ಜೋಡೋ’ ಯಾತ್ರೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.

2) ಗಾಂಧಿ ಜಯಂತಿಯಂದು ಅಂದರೆ ಅಕ್ಟೋಬರ್ 2ರಂದು ಪಾದಯಾತ್ರೆಗೆ ಚಾಲನೆ ಸಿಗಲಿದೆ.

3) ರಾಹುಲ್ ಗಾಂಧಿ ನೇತೃತ್ವದಲ್ಲಿ ಅಕ್ಟೋಬರ್‌ನಿಂದ ಒಂದು ವರ್ಷದಷ್ಟು ಸುದೀರ್ಘ ಮತ್ತು ಬೃಹತ್ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ.

4) ಅಗತ್ಯ ಪ್ರದೇಶಗಳಲ್ಲಿ ಜನತಾ ದರ್ಬಾರ್ ಹೆಸರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ.
ಮತ್ತೆ ಪುಟಿದೇಳ್ತೀವಿ ಎಂದು ಸೋನಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಗೆ ಪಾಂಡ್ಯ /ಶಿಖರ್
ಧವನ್ ಗೆ ಭಾರತದ ನಾಯಕತ್ವ?

ಜನರ ಸಂಪರ್ಕ ಕೊಂಡಿ ಕಳಚಿದೆ – ರಾಹುಲ್ :

ಈ ಮಧ್ಯೆ ಶತಮಾನದ ಹಳೆಯ ಪಕ್ಷ ಜನರೊಂದಿಗೆ ಸಂಪರ್ಕ ಕಡಿತಗೊಂಡಿರೋದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ‘ಜನರೊಂದಿಗೆ ನಮ್ಮ ಸಂಪರ್ಕದ ಕೊಂಡಿ ಕಳಚಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನು ನಾವು ಪುನಶ್ಚೇತನಗೊಳಿಸಿ, ಬಲಪಡಿಸಬೇಕು. ಇದಕ್ಕೆ ಯಾವುದೇ ಅಡ್ಡದಾರಿಯಿಲ್ಲ. ಕಠಿಣ ಪರಿಶ್ರಮವೊಂದೇ ಮಾರ್ಗ ಎಂದು ರಾಹುಲ್ ಗಾಂಧಿ ಹೇಳಿದರು

ಪಕ್ಷವನ್ನು ತಳಮಟ್ಟದಿಂದ ಆಕ್ರಮಣಕಾರಿಯಾಗಿ ಬದಲಿಸಿದಾಗ ಮಾತ್ರ ಆರ್‌ಎಸ್‌ಎಸ್ ಎದುರಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯ ದ್ವೇಷ ಸಿದ್ಧಾಂತದ ವಿರುದ್ಧ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷದಂತೆ ಹೋರಾಡುವುದು ಸಾಧ್ಯವಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಪಕ್ಷ `ಒಂದು ಕುಟುಂಬ, ಒಂದು ಟಿಕೆಟ್’ ನಿರ್ಣಯದ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ. ಆ ಪಕ್ಷದ್ದು ಧೃತರಾಷ್ಟ್ರ ಮೋಹ. ಉತ್ತರ ಪ್ರದೇಶ ಚುನಾವಣೆಯಲ್ಲಿ ವಂಶವಾದದ ವಿರುದ್ಧ ಮೋದಿ ಗಟ್ಟಿಯಾಗಿ ನಿಂತರು. ಆ ರೀತಿಯ ಧೈರ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯಾ ಎಂದು ಬಿಜೆಪಿ ಪ್ರಶ್ನಿಸಿದೆ. ತಾಕತ್ತಿದ್ರೆ ಆಂತರಿಕ ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದೆ.

Copyright © All rights reserved Newsnap | Newsever by AF themes.
error: Content is protected !!