ರಾಜ್ಯ ಕಾಂಗ್ರೆಸ್ ನಾಯಕರುಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಾರೆ. ಆದರೆ, ರಾಜ್ಯದಲ್ಲಿ ಈಗ ಬಿಜೆಪಿ ಪರವಾದ ಬಿರುಗಾಳಿ ಇದೆ ಮುಂದಿನ 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮೂಲಕ ಗುಜರಾತ್ ಮಾದರಿಯಲ್ಲಿ ದಾಖಲೆ ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸವ್ಯಕ್ತಪಡಿಸಿದರು.
ಇಲ್ಲಿನ ಪಾಂಡವ ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ನಡೆದ ಜನಸಂಕಲ್ಪ ಯಾತ್ರೆ ಸಮಾವೇಶವನ್ನು ಗೋಪೂಜೆ, ಭತ್ತದ ರಾಶಿಪೂಜೆಸಲ್ಲಿಸಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿವಮೂರ್ತಿ ಸ್ವಾಮಿ ವಿರುದ್ಧ ಪಿತೂರಿ ಪ್ರಕರಣ: ಬಸವರಾಜನ್ ಪತ್ನಿ ಸೌಭಾಗ್ಯ ಬಂಧನ
ಈ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ ಬ್ಯಾಂಕ್ ಗಾಗಿ ಅಲ್ಪಸಂಖ್ಯಾತರ ಓಲೈಕೆ, ಹಿಂದೂವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ. ಸಿದ್ದರಾಮಯ್ಯ ಟಿಪ್ಪು ಬಗ್ಗೆ ಮಾತನಾಡುತ್ತಾರೆ. ಅಲ್ಪಸಂಖ್ಯಾರರ ಓಲೈಕೆ ಮಾಡಿಕೊಳ್ಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕುಕ್ಕರ್ ನಲ್ಲಿ ಬಾಂಬ್‍ಬ್ಲಾಸ್ಟ್ ಮಾಡಿದ ಉಗ್ರನನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಿಲುವು ದೇಶದ ಪರವಾಗಿಯೋ ಅಥವಾ ಭಯೋತ್ಪಾದಕರ ಪರವಾಗಿದೆಯೋ ಎನ್ನುವುದನ್ನು ಕಾಂಗ್ರೆಸ್‍ನವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಮೋದಿ ಟೀಕಿಸುವುದು ಸಿದ್ದು ಗುರಿ:
ಸಿದ್ದರಾಮಯ್ಯನವರಿಗೆ ಪ್ರಧಾನಮಂತ್ರಿ ಮೋದಿವರನ್ನು ಟೀಕೆ ಮಾಡೋದನ್ನು ಬಿಟ್ಟರೆ ಬೇರೆನು ಕೆಲಸವಿಲ್ಲ. ಸಿದ್ದರಾಮಯ್ಯನವರಿಗೆ ಕನಸ್ಸಿನಲ್ಲೂ ನರೇಂದ್ರಮೋದಿ ಅವರು ಬರುತ್ತಾರೆ ಅನ್ನಿಸುತ್ತದೆ ಎಂದು ಟೀಕಿಸಿದ ಅವರು, ಸಿದ್ದರಾಮಯ್ಯನವರು ನಾನು ಅನ್ನಭಾಗ್ಯದ ಮೂಲಕ ಜನರಿಗೆ ಅಕ್ಕಿಕೊಟ್ಟೆ ಎಂದು ಹೇಳಿಕೊಳ್ಳುತ್ತಾರೆ.
ಅನ್ನಭಾಗ್ಯದ 30 ರೂ. ಅಕ್ಕಿ ನರೇಂದ್ರಮೋದಿ ಅವರು ಕೊಟ್ಟಿದ್ದು, ಅಕ್ಕಿಯ ಮೇಲಿದ್ದ 3 ರೂ.ಚೀಲ ಮಾತ್ರ ಸಿದ್ದರಾಮಯ್ಯನವರು ಕೊಟ್ಟಿದ್ದು. ಅನ್ನಭಾಗ್ಯದಲ್ಲಿ ಕನ್ನ ಹೊಡೆದು ಭ್ರಷ್ಟಚಾರ, ಬ್ಲಾಕ್ ಮಾರುಕಟ್ಟೆ ಬೆಂಬಲ ನೀಡಿದವರು ಕಾಂಗ್ರೆಸ್‍ನವರು ಎಂದು ಕಿಡಿಕಾರಿದರು.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ