February 21, 2026

Newsnap Kannada

The World at your finger tips!

vaccine

ಕಾಂಗ್ರೆಸ್ ಪಾದಯಾತ್ರೆ ಎಫೆಕ್ಟ್ – ಕೋಲಾರದ 25 ಪೊಲೀಸರಿಗೆ ಕೊರೊನಾ ಸೋಂಕು

Spread the love

ಕೋಲಾರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಭದ್ರತೆಗಾಗಿ ತೆರಳಿದ್ದ ಕೋಲಾರದ 25 ಮಂದಿ ಪೊಲೀಸರಿಗೆ ಸೋಂಕು ದೃಢಪಟ್ಟಿದೆ.

ಶುಕ್ರವಾರ ಕೋಲಾರದ ಟ್ರಾಫಿಕ್ ಪೊಲೀಸ್ ಠಾಣೆಯ ಮೂವರು ಪೊಲೀಸ್ ಪೇದೆಗಳಿಗೆ ಕೊರೊನಾ ಕಾಣಿಸಿಕೊಂಡಿತ್ತು.

ಇಂದು ಮತ್ತೆ ಕೆಜಿಎಫ್ ತಾಲೂಕಿನ 25 ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದೆ.

ಮೇಕೆದಾಟು ಪಾದಯಾತ್ರೆ ಬಂದೊಬಸ್ತ್‍ಗೆ ತೆರಳಿದ್ದ ಪೊಲೀಸರಿಗೆ ಹಾಗೂ ಅವರ ಕುಟುಂಬದವರಿಗೆ ಆತಂಕ ಉಂಟುಮಾಡಿದೆ.

ಈಗಾಗಲೇ ಜಿಲ್ಲೆಯಲ್ಲಿ ಪಾದಯಾತ್ರೆಯಲ್ಲಿ ಭದ್ರತೆಗಾಗಿ ತೆರಳಿದ್ದ 50 ಹೆಚ್ಚು ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನೂ ಹಲವು ಪೊಲೀಸರು ಬಂದೋಬಸ್ತ್‍ಗೆ ರಾಮನಗರಕ್ಕೆ ತೆರಳಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಪೋಲಿಸರಿಗೆ ಸೊಂಕು ತಗುಲಿರುವ ಸಾಧ್ಯತೆಯಿದ್ದು, ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

error: Content is protected !!